Select Your Language

Notifications

webdunia
webdunia
webdunia
webdunia

ಪಾಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ !

ಪಾಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ !
ಇಸ್ಲಾಮಾಬಾದ್ , ಬುಧವಾರ, 1 ಫೆಬ್ರವರಿ 2023 (08:35 IST)
ಇಸ್ಲಾಮಾಬಾದ್ : ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 35 ರೂ. ಪಾಕಿಸ್ತಾನ ರೂಪಾಯಿ ಹೆಚ್ಚಿಸಿದೆ. ಇಂಧನ ಬೆಲೆಗಳು ಭಾನುವಾರದಿಂದಲೇ (ಜ.29) ಜಾರಿಗೆ ಬಂದಿದೆ.
 
ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರು ಇಂಧನ ಬೆಲೆಗಳ ಏರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ. ಸೀಮೆಎಣ್ಣೆ ಮತ್ತು ಲೈಟ್ ಡೀಸೆಲ್ ಆಯಿಲ್ ಬೆಲೆಯನ್ನು ಲೀಟರ್ಗೆ 18 ರೂ. ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಪೆಟ್ರೋಲ್ ಬೆಲೆ ಲೀಟರ್ಗೆ 249.80 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ಗೆ 262.80 ರೂ. ಪಿಆರ್ಕೆ ಇದೆ ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯವು ಟ್ವೀಟ್ನಲ್ಲಿ ತಿಳಿಸಿದೆ. 

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೂಚನೆ ನೀಡಿದ ಬೆನ್ನಲ್ಲೇ ಈ ನಾಲ್ಕು ಉತ್ಪನ್ನಗಳ ಕನಿಷ್ಠ ಬೆಲೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಕಳೆದ ವಾರ ಪಾಕಿಸ್ತಾನದ ರೂಪಾಯಿ ಅಪಮೌಲ್ಯಕ್ಕೆ ಸಾಕ್ಷಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಶೇ.11 ರಷ್ಟು ಏರಿಕೆಯಾಗುತ್ತಿದೆ ಎಂದು ಇಶಾಕ್ ದಾರ್ ಸ್ಪಷ್ಟಪಡಿಸಿದ್ದಾರೆ.

ಹೊಸ ಬೆಲೆಗಳ ಘೋಷಣೆಯು ಪೆಟ್ರೋಲ್ ಪೂರೈಕೆಯ ಕೊರತೆಯ ಬಗ್ಗೆ ಎದ್ದಿರುವ ವದಂತಿಗಳನ್ನು ಹೋಗಲಾಡಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 50 ರೂಪಾಯಿ ಏರಿಕೆಯಾಗಲಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಜ್ಯುವೆಲ್ಲರಿ ಶಾಪ್ಗಳ ಮೇಲೆ ಐಟಿ ದಾಳಿ!