ನವದೆಹಲಿ : ಸಿಂಧೂನದಿ ವಿಚಾರದಲ್ಲಿ ಡಬಲ್ಗೇಮ್ ಆಡ್ತಿರೋ ಪಾಕಿಸ್ತಾನದ ವಿರುದ್ಧ ಭಾರತ ಈಗ ಜಲಯುದ್ಧ ಸಾರಿದೆ. ಸಿಂಧೂ ಜಲ ಒಪ್ಪಂದದಲ್ಲಿ ಬದಲಾವಣೆಗಾಗಿ ಪಾಕಿಸ್ತಾನಕ್ಕೆ ಭಾರತ ನೋಟಿಸ್ ಜಾರಿ ಮಾಡಿದೆ.
ಒಪ್ಪಂದದ ಉಲ್ಲಂಘನೆಯನ್ನು 90 ದಿನಗಳ ಒಳಗೆ ಸರಿಪಡಿಸಲು ಸೂಚಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಭಾರತದ ನಿರಂತರ ಪ್ರಯತ್ನದ ನಡುವೆಯೂ ಕಿಶೆನ್ಗಂಗಾ, ರಾಟ್ಲ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ಸ್ ಸಂಬಂಧ ಚರ್ಚಿಸಲು ಪಾಕಿಸ್ಥಾನ ಮುಂದಾಗಿಲ್ಲ.
ಸಿಂಧೂ ಜಲ ಒಪ್ಪಂದಕ್ಕೆ ಅನುಗುಣವಾಗಿ ಸಂಪೂರ್ಣ, ಯಥಾವತ್ತಾಗಿ ಜಾರಿಗೊಳಿಸಿಲ್ಲ. ಇದು ಐಡಬ್ಲ್ಯೂಟಿಯಲ್ಲಿನ ಬದಲಾವಣೆಗಾಗಿ ಸೂಕ್ತ ಅಂತಲೂ ನೋಟಿಸ್ನಲ್ಲಿ ಹೇಳಿದೆ.