ರಾಂಚಿ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಏಕದಿನ ಸರಣಿ ಬಳಿಕ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗುತ್ತಿದೆ.
ಮೊದಲ ಪಂದ್ಯ ಧೋನಿ ತವರು ರಾಂಚಿಯಲ್ಲಿ ನಡೆಯುತ್ತಿದೆ. ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಟೀಂ ಇಂಡಿಯಾ ಈಗ ಟಿ20 ಸರಣಿಯಲ್ಲಿ ಯುವ ಪಡೆಯನ್ನು ಪರೀಕ್ಷೆಗೊಳಪಡಿಸಲಿದೆ.
ಇತ್ತೀಚೆಗಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ಪಡೆ ಟಿ20 ಕ್ರಿಕೆಟ್ ನಲ್ಲಿ ಸತತ ಗೆಲುವನ್ನು ಕಾಣುತ್ತಲೇ ಬಂದಿದೆ. ಈ ಬಾರಿ ತವರಿನಲ್ಲೇ ಸರಣಿ ನಡೆಯುತ್ತಿರುವುದರಿಂದ ಗೆಲುವು ಕಷ್ಟವೇನಲ್ಲ. ಬಹಳ ದಿನಗಳ ನಂತರ ಪೃಥ್ವಿ ಶಾ ತಂಡದಲ್ಲಿ ಸ್ಥಾನ ಪಡೆದಿದ್ದು, ಫಾರ್ಮ್ ನಲ್ಲೂ ಇರುವುದರಿಂದ ಆಡುವ ಅವಕಾಶ ಪಡೆಯಬಹುದು. ಅವರ ಜೊತೆಗೆ ಇಶಾನ್ ಕಿಶನ್ ಅಥವಾ ಋತುರಾಜ್ ಗಾಯಕ್ ವಾಡ್ ಓಪನಿಂಗ್ ಮಾಡಬಹುದು. ಮಧ್ಯಮ ಕ್ರಮಾಂಕಕ್ಕೆ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ಬಲ.
ಬೌಲಿಂಗ್ ವಿಭಾಗದಲ್ಲಿ ಅರ್ಷ್ ದೀಪ್ ಸಿಂಗ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದು, ಅವರಿಗೆ ಯುವ ವೇಗಿ ಉಮ್ರಾನ್ ಮಲಿಕ್ ಸಾಥ್ ನೀಡಬಹುದು. ಸ್ಪಿನ್ನರ್ ಗಳ ಪೈಕಿ ಕುಲದೀಪ್ ಯಾದವ್ ಅತ್ಯುತ್ತಮ ಫಾರ್ಮ್ ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಈ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದೆ.