Select Your Language

Notifications

webdunia
webdunia
webdunia
webdunia

ಐಸಿಸಿ ಏಕದಿನ, ಟಿ20ಗೆ ಭಾರತವೇ ನಂ.1

webdunia
ದುಬೈ , ಗುರುವಾರ, 26 ಜನವರಿ 2023 (07:28 IST)
Photo Courtesy: Twitter
ದುಬೈ: ಸತತ ಎರಡು ಸರಣಿ ಗೆಲುವಿನಿಂದಾಗಿ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕದಲ್ಲಿ ಭಾರೀ ಏರಿಕೆ ಕಂಡಿದ್ದು, ನಂ.1 ಸ್ಥಾನಕ್ಕೇರಿದೆ.

ಕಳೆದ ಎರಡು ವರ್ಷಗಳಲ್ಲಿ ಟೀಂ ಇಂಡಿಯಾ ಸಾಧನೆ ಕಳೆಗುಂದಿತ್ತು. ವೈಯಕ್ತಿಕವಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ತಂಡ ನೀರಸ ಪ್ರದರ್ಶನ ನೀಡಿತ್ತು. ಹೀಗಾಗಿ ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆಯಲು ವಿಫಲವಾಗಿತ್ತು.

ಆದರೆ ಈ ವರ್ಷ ಆರಂಭದಲ್ಲೇ ಭಾರತದ ಶುಭ ಗಳಿಗೆ ಶುರುವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಬ್ಮನ್ ಗಿಲ್ ಭರ್ಜರಿ ಫಾರ್ಮ್ ನಲ್ಲಿದ್ದು, ಶ್ರೀಲಂಕಾ, ನ್ಯೂಜಿಲೆಂಡ್‍ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ದಿಗ್ವಿಜಯ ಸಾಧಿಸಿದೆ. ಇದರೊಂದಿಗೆ ಶ್ರೇಯಾಂಕದಲ್ಲಿ ಭಾರೀ ಏರಿಕೆ ಕಂಡಿದ್ದು, ಟಿ20 ಮತ್ತು ಏಕದಿನ ಮಾದರಿಯಲ್ಲಿ ನಂ.1 ಶ್ರೇಯಾಂಕಕ್ಕೇರಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ನಡೆಯಲಿದ್ದು, ಈ ಸರಣಿ ಗೆದ್ದು ಟೆಸ್ಟ್ ನಲ್ಲೂ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನವ ವಿವಾಹಿತ ಕೆಎಲ್ ರಾಹುಲ್ ಗೆ ಸಿಕ್ತು ಕೊಹ್ಲಿ, ಧೋನಿಯಿಂದ ದುಬಾರಿ ಉಡುಗೊರೆ