ಇಂಧೋರ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಸತತ ಮೂರನೇ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡುವ ಗುರಿ ಭಾರತದ್ದಾಗಿದೆ.
ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಹೊಂದಿದೆ. ಹೀಗಾಗಿ ಈ ಪಂದ್ಯ ಔಪಚಾರಿಕವಾದರೂ, ಈ ಪಂದ್ಯವನ್ನೂ ಗೆದ್ದು ಸತತ ಎರಡನೇ ಬಾರಿಗೆ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಗುರಿ ಟೀಂ ಇಂಡಿಯಾಗಿರಲಿದೆ.
ಈ ಪಂದ್ಯದಲ್ಲಿ ಭಾರತ ಕೆಲವೊಂದು ಬದಲಾವಣೆ ಮಾಡಿಕೊಂಡರೂ ಅಚ್ಚರಿಯಿಲ್ಲ. ಯಜುವೇಂದ್ರ ಚಾಹಲ್, ರಜತ್ ಪಟಿದಾರ್ ಮತ್ತು ಶ್ರೀಕರ್ ಭರತ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕೊನೆಯ ಪಂದ್ಯದಲ್ಲಿ ಭಾರತ ತಂಡ ಬೆಂಚ್ ಸ್ಟ್ರೆಂಗ್ತ್ ಪರೀಕ್ಷಿಸಬಹುದು. ಇನ್ನು, ನ್ಯೂಜಿಲೆಂಡ್ ಗೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ತಲೆನೋವಾಗಿದೆ. ಎರಡೂ ಪಂದ್ಯಗಳಲ್ಲಿ ಬ್ರೇಸ್ ವೆಲ್ ಒಬ್ಬರೇ ಮಿಂಚಿದ್ದಾರೆ. ಈ ಪಂದ್ಯ ಇಂಧೋರ್ ನಲ್ಲಿ ನಡೆಯುತ್ತಿದ್ದು, ಮಧ‍್ಯಾಹ್ನ 1.30 ಕ್ಕೆ ಆರಂಭವಾಗಲಿದೆ.