ರಾಂಚಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾಗೆ ರನ್ ಗಳ ಗುರಿ ನೀಡಲಾಗಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಬ್ಯಾಟಿಗರು ಉತ್ತಮ ಆರಂಭ ಪಡೆದರು. ಡೆವನ್ ಕಾನ್ವೇ 35 ಎಸೆತಗಳಲ್ಲಿ 52, ಫಿನ್ ಅಲೆನ್ 23 ಎಸೆತಗಳಲ್ಲಿ 35 ರನ್ ಗಳಿಸಿದರು. ಮಧ‍್ಯಮ ಕ್ರಮಾಂಕ ಬ್ಯಾಟಿಂಗ್ ಕೈ ಕೊಟ್ಟಿದ್ದರಿಂದ ಕಿವೀಸ್ 200 ರ ಗಡಿ ತಲುಪಲು ವಿಫಲವಾಯಿತು.
ಆದರೆ ಕೊನೆಯಲ್ಲಿ ಅಬ್ಬರಿಸಿದ ಡೆರಿಲ್ ಮಿಚೆಲ್ ಕೇವಲ 30 ಎಸೆತಗಳಲ್ಲಿ 59 ರನ್ ಚಚ್ಚಿದರು. 19 ನೆಯ ಓವರ್ ನಲ್ಲಿ ಡೆರಿಲ್ ಸತತ ಸಿಕ್ಸರ್ ಬಾರಿಸಿ ತಂಡಕ್ಕೆ ಭರ್ಜರಿ ಮೊತ್ತ ಗಳಿಸಿಕೊಟ್ಟರು. ಇದರೊಂದಿಗೆ ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.