Select Your Language

Notifications

webdunia
webdunia
webdunia
Saturday, 12 April 2025
webdunia

ಕಾರಿನ ಟಾಪ್​ನಲ್ಲಿ ಕುಳಿತ ನಾಯಿ

ಕಾರಿನ ಟಾಪ್​ನಲ್ಲಿ ಕುಳಿತ ನಾಯಿ
bangalore , ಭಾನುವಾರ, 12 ಫೆಬ್ರವರಿ 2023 (19:11 IST)
ಸಾಮಾಜಿಕ ಮಾಧ್ಯಮಗಳು ಈಗ ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ. ಪ್ರತಿದಿನ ನಾವು ನಮ್ಮ ಮೊಬೈಲ್ ಫೋನ್  ಅಥವಾ ಕಂಪ್ಯೂಟರ್ ಸ್ಕ್ರೀನ್​ನಲ್ಲಿ ವೈರಲ್ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಇವುಗಳಲ್ಲಿ ಕೆಲವು ವಿಡಿಯೋಗಳು ನಮ್ಮ ಮುಖದಲ್ಲಿ ನಗುವನ್ನು ಮೂಡಿಸಿದರೆ, ಇನ್ನು ಕೆಲವು ಜನರನ್ನು ಕೆರಳಿಸುತ್ತವೆ. ಜನರು ಯಾವುದೇ ನಿಯಮಗಳನ್ನು ಉಲ್ಲಂಘಿಸುವುದನ್ನು ಕಂಡರೆ ಅದರ ಫೋಟೋ ಮತ್ತು ವೀಡಿಯೊಗಳನ್ನು ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಇದರಿಂದ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಾಗುತ್ತಿದೆ. ಅದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಚಲಿಸುವ ಕಾರಿನ ಸನ್​ರೂಫ್ ಮೇಲೆ ನಾಯಿಯೊಂದು ಕುಳಿತಿರುವ ವಿಡಿಯೋ ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ. ಕಾರಿನ ಟಾಪ್​ನಲ್ಲಿ ನಾಯಿ ಕುಳಿತಿರುವ ವಿಡಿಯೋವನ್ನು ಹಿಂದಿನ ವಾಹನದಲ್ಲಿದ್ದ ಕೆಲವರು ರೆಕಾರ್ಡ್ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನುಗು ಹಿನ್ನೀರಿನಲ್ಲಿ ಕಾಡಾನೆ ಪ್ರತ್ಯಕ್ಷ