ಮೈಸೂರು: ರಾಜಕಿಯ, ಜನ ಜೀವನ ಬಗ್ಗೆ ಕರಾರುವಾಕ್ ಭವಿಷ್ಯ ನುಡಿಯುವ ಕೋಡಿಶ್ರೀಗಳು ಈಗ ಮತ್ತೊಮ್ಮೆ ಭವಿಷ್ಯವಾಣಿ ನುಡಿದಿದ್ದು ರಾಜ್ಯಕ್ಕೆ ಮತ್ತು ದೇಶಕ್ಕೆ ಸದ್ಯದಲ್ಲೇ ಗಂಡಾಂತರ ಕಾದಿದೆ ಎಂದಿದ್ದಾರೆ.
ನಮನ್ ಫೌಂಡೇಷನ್ ಸ್ಥಾಪಿಸಿರುವ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಮಾಧ್ಯಮಗಳು ಅವರಿಗೆ ಭವಿಷ್ಯದ ದಿನಗಳ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಈ ವೇಳೆ ಅವರು ಹೇಳಿರುವ ಭವಿಷ್ಯವಾಣಿ ಆತಂಕ ಹುಟ್ಟಿಸುವಂತಿದೆ.
ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮತ್ತು ದೇಶಕ್ಕೆ ದೊಡ್ಡ ಗಂಡಾಂತರ ಕಾದಿದೆ. ಇಡೀ ವಿಶ್ವವೇ ನೋಡುವಂತಹ ಗಂಡಾಂತರವೊಂದು ಭಾರತಕ್ಕೆ ಕಾದಿದೆ. ಅಧಿಕಾರದಲ್ಲಿರುವವರಿಗೂ ತೊಂದರೆಗಳಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಮೊದಲೇ ಎಚ್ಚೆತ್ತುಕೊಂಡು ಪರಿಹಾರ ಕಂಡು ಕೊಂಡರೆ ಉತ್ತಮ ಎಂದಿದ್ದಾರೆ. ಈ ಹಿಂದೆ ವಿಮಾನ ದುರಂತದ ಬಗ್ಗೆಯೂ ಕೋಡಿಶ್ರೀಗಳು ಮೊದಲೇ ಭವಿಷ್ಯ ನುಡಿದಿದ್ದರು. ಕೆಲವೇ ದಿನಗಳಲ್ಲಿ ಅಹ್ಮದಾಬಾದ್ ನಲ್ಲಿ ದೊಡ್ಡ ವಿಮಾನ ದುರಂತ ಸಂಭವಿಸಿತ್ತು. ಇದೀಗ ಕೋಡಿಶ್ರೀಗಳು ನುಡಿದಿರುವ ಭವಿಷ್ಯ ಆತಂಕ ತರುವಂತಿದೆ.