ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಆಷಾಢ ಶುಕ್ರವಾರ ನಿಮಿತ್ತ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ, ಸಹೋದರನ ಸಮೇತ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಜೊತೆಗಿರುವ ವಿಡಿಯೋ ಒಂದು ವೈರಲ್ ಆಗಿದ್ದು ಏನು ಲುಕ್ ಗುರೂ ಎಂದು ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಮೈಸೂರಿನಲ್ಲಿ ಆಷಾಢ ಶುಕ್ರವಾರ ನಿಮಿತ್ತ ಇಂದು ಜನದಟ್ಟಣೆಯಿದೆ. ಇದರ ನಡುವೆ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಮತ್ತು ಅವರ ಪತ್ನಿ ಜೊತೆ ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದಾರೆ. ಈ ವೇಳೆ ಸಾಕಷ್ಟು ಅಭಿಮಾನಿಗಳು ಅವರನ್ನು ನೋಡಲು ನೂಕುನುಗ್ಗಲು ನಡೆಸಿದ್ದಾರೆ.
ಪತ್ನಿ ಜೊತೆ ದೇವಾಲಯಕ್ಕೆ ತೆರಳುವಾಗ ತಮಗೆ ಜೈಕಾರ ಹಾಕುತ್ತಿದ್ದ ಅಭಿಮಾನಿಗಳತ್ತ ನಗು ನಗುತ್ತಲೇ ದರ್ಶನ್ ಕೈ ಬೀಸಿದರು. ದೇವಿ ಮುಂದೆ ದರ್ಶನ್ ಗೆ ಹಾರ ಹಾಕಿ ಅರ್ಚಕರು ಗೌರವ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಟೆಂಪಲ್ ರನ್ ಜಾಸ್ತಿಯಾಗಿದೆ. ಎಲ್ಲೇ ಹೋದರೂ ಪತ್ನಿ ಜೊತೆಗೆ ಹೋಗುತ್ತಿರುವುದು ವಿಶೇಷ. ಈ ಮೂಲಕ ದರ್ಶನ್ ಈಗ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ.