Select Your Language

Notifications

webdunia
webdunia
webdunia
webdunia

Darshan: ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ವಿರುದ್ಧ ದೂರು: ಫಾರಂಹೌಸ್ ಮೇಲೆ ರೇಡ್

Darshan, Vijayalakshmi

Krishnaveni K

ಮೈಸೂರು , ಶುಕ್ರವಾರ, 23 ಮೇ 2025 (11:40 IST)
ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಓಡಾಡಿಕೊಂಡಿರುವ ನಟ ದರ್ಶನ್ ಈಗ ಮತ್ತೆ ಸಹಜ ಜೀವನಕ್ಕೆ ಮರಳುತ್ತಾರೆನ್ನುವಾಗ ಸಂಕಷ್ಟವೊಂದು ಎದುರಾಗಿದೆ. ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ  ವಿರುದ್ಧ ದೂರು ದಾಖಲಾಗಿದ್ದು ಫಾರಂಹೌಸ್ ಮೇಲೆ ರೇಡ್ ಮಾಡಲಾಗಿದೆ.

ನಟ ದರ್ಶನ್ ಮಾಲಿಕತ್ವದ ಟಿ ನರಸೀಪುರದಲ್ಲಿರುವ ಫಾರಂ ಹೌಸ್ ನಲ್ಲಿ ಅಪರೂಪದ ತಳಿಯ ಬಾತುಕೋಳಿಯೊಂದನ್ನು ಸಾಕಿದ್ದಾರೆ. ಇದನ್ನು ಖಾಸಗಿಯಾಗಿ ಸಾಕುವುದು ಅಪರಾಧವಾಗಿದೆ. ಆದರೆ ಯೂ ಟ್ಯೂಬ್ ಸಂದರ್ಶನವೊಂದರ ವೇಳೆ ದರ್ಶನ್ ಈ ಬಾತುಕೋಳಿ ಬಗ್ಗೆ ವಿವರಣೆ ನೀಡಿರುವುದು ಅರಣ್ಯ ಇಲಾಖೆ ಗಮನಕ್ಕೆ ಬಂದಿದೆ.

ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಫಾರಂ ಹೌಸ್ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಈ ಬಾತುಕೋಳಿಗಳನ್ನು ನಮ್ಮ ಸ್ನೇಹಿತರೊಬ್ಬರು ನೀಡಿದ್ದರು ಎಂದು ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಖಾಸಗಿ ದೂರು ಸಲ್ಲಿಸಿದ್ದಾರೆ.

ಹೀಗಾಗಿ ಈಗ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಜಾಗ ವಿಜಯಲಕ್ಷ್ಮಿ ಮಾಲಿಕತ್ವದಲ್ಲಿರುವ ಕಾರಣ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Chaitra Kundapura: ತಂದೆಯ ಹತ್ಯೆಗೆ ಚೈತ್ರಾ ಕುಂದಾಪುರ ಸುಪಾರಿ: ಇದೇನಿದು ಆರೋಪ