Publish Date: Sat, 21 Jun 2025 (15:23 IST)
Updated Date: Sat, 21 Jun 2025 (15:26 IST)
ಬೆಂಗಳೂರು: ಈ ವರ್ಷ ಯಾಕೋ ಒಂದಾದ ಮೇಲೊಂದರಂತೆ ದುರಂತ ಸಂಭವಿಸುತ್ತಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಕೋಡಿ ಶ್ರೀಗಳು ಮತ್ತೊಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಊಹಿಸಲಾಗದ ದುಃಖ, ಗಂಡಾಂತರ ಕಾದಿದೆ ಎಂದಿದ್ದಾರೆ.
ಆಗಾಗ ದೇಶ, ರಾಜಕೀಯ, ಹವಾಮಾನದ ಕುರಿತು ಕರಾರುವಾಕ್ ಭವಿಷ್ಯ ನುಡಿಯುವ ಕೋಡಿ ಶ್ರೀಗಳು ಈ ಬಾರಿ ಹೇಳಿರುವ ಭವಿಷ್ಯ ನಿಜಕ್ಕೂ ಆತಂಕ ತರುವಂತಿದೆ. ಇದಕ್ಕೆ ಮೊದಲು ಕೋಡಿ ಶ್ರೀಗಳು ಹೇಳಿದ್ದ ಅನೇಕ ಭವಿಷ್ಯಗಳು ನಿಜವಾಗಿತ್ತು.
ಇದೀಗ ಜನವರಿ ಒಳಗಾಗಿ ದೇಶಕ್ಕೆ ಭಾರೀ ಗಂಡಾಂತರವಿದೆ ಎಂದಿದ್ದಾರೆ. ಯಾರೂ ಊಹಿಸಲಾಗದ ದುಃಖ ಕಾದಿದೆ. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಮುಂದೆ ಜಲಪ್ರಳಯ ಗಂಡಾಂತರವಿದೆ ಎಂದಿದ್ದಾರೆ.
ಈಗಾಗಲೇ ಮೇಘ ಸ್ಪೋಟ, ಜಲಪ್ರಳಯ, ವಾಯುವಿನಿಂದ ಆಪತ್ತು ಬರಬಹುದು ಎಂದಿದ್ದೆ. ವಿಮಾನ ಅಪಘಾತ ಕೆಲವು ದುರಂತಗಳು ಈಗಾಗಲೇ ಸಂಭವಿಸಿದೆ. ಮುಂದೆ ಮೇಘಸ್ಪೋಟವಾಗಬಹುದು. ಇದರಿಂದ ನಿರೀಕ್ಷೆಗೂ ಮೀರಿದ ದುಃಖವಾಗಲಿದೆ ಎಂದಿದ್ದಾರೆ. ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ. ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. ಜನ ಜೀವನ ಅಸ್ಥಿರಗೊಳ್ಳಲಿದೆ ಎಂದಿದ್ದಾರೆ. ಅವರ ಈ ಭವಿಷ್ಯವಾಣಿ ನಿಜಕ್ಕೂ ಆತಂಕ ಮೂಡಿಸುವಂತಿದೆ.