Publish Date: Fri, 16 Feb 2024 (21:22 IST)
Updated Date: Fri, 16 Feb 2024 (19:25 IST)
ಬೆಂಗಳೂರು-ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ ಒಂದು ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ ರೌಡಿಶೀಟರ್ ಸೇರಿ ಐವರನ್ನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಕಳೆದ 14 ರಂದು ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಲಕ್ಷ್ಮಿ ಎಂಬಾಕೆ ದೂರು ನೀಡಿದ್ರು.ಮನೆ ಕಟ್ಟಲಿಕ್ಕೆ ಒಂದು ಕೋಟಿ ಹಣ ಶ್ರೀಮತಿ ಲಕ್ಷ್ಮಿ ಲೋನ್ ಪಡೆದಿದ್ದರು.ಆಗ ಶ್ರೀಮತಿ ಲಕ್ಷ್ಮಿ ಎಂಬುವವರ ಸಹಾಯಕರಿಬ್ಬರನ್ನು ಕಿಡ್ನಾಪ್ ಮಾಡಲಾಗಿತ್ತು.ಚಾಮುಂಡೇಶ್ವರಿ ಎಂಟರ್ ಪ್ತೈಸರ್ ಹೆಸರಲ್ಲಿ ಸೀರಿಯಲ್ ಶ್ರೀಮತಿ ಲಕ್ಷ್ಮಿ ಮಾಡ್ತಿದ್ರು.ಲಕ್ಷ್ಮಿಯವರಿಗೆ ಒಂದು ಕೋಟಿ ಲೋನ್ ಆಗಿದ್ದ ವಿಚಾರವನ್ನು ಆರೋಪಿಗಳು ತಿಳಿದಿದ್ದರು.
ಅನುಮಾನ ಬಾರದಿರಲಿ ಅಂತಾ ಪ್ರೊಡಕ್ಷ್ನ್ ಅಸಿಸ್ಟೆಂಟ್ ನಾಗೇಶ್ ಜೊತೆ ಕಾರ್ ಡ್ರೈವರ್ ಹೇಮಂತ್ ಸಹ ಕಿಡ್ನಾಪ್ ಮಾಡಿ ಚಿಕ್ಕಮಧುರೆ ಫಾರ್ಮ್ ಹೌಸ್ ನಲ್ಲಿಟ್ಟದ್ದಾರೆ.ಆರೋಪಿಗಳ ಚಲನವಲನದ ಸಿಸಿಟಿವಿ , ಟೋಲ್ ಸಿಸಿಟಿವಿ ಪತ್ತೆಯಾಗಿದ್ದು,ಸದ್ಯ ರೌಡಿ ಶೀಟರ್ ಗಳಾದ ಶ್ರೀನಿವಾಸ್ , ಮೋಹನ್ , ಮಾಜಿ ಉದ್ಯೋಗಿ ಕಿರಣ್ , ಹಾಲಿ ಡ್ರೈವರ್ ಹೇಮಂತ್ ಹಾಗೂ ಕುಲ್ದೀಪ್ ಸಿಂಗ್ ಅರೆಸ್ಟ್ ಮಾಡಲಾಗಿದೆ.