Select Your Language

Notifications

webdunia
webdunia
webdunia
webdunia

ಏನಿಲ್ಲ ಏನಿಲ್ಲಾ …ಸಿದ್ದರಾಮಯ್ಯ ಬಜೆಟ್‌ ನಲ್ಲಿ ಏನಿಲ್ಲ

cm sidaramayya budjet
ಬೆಂಗಳೂರು -ರಾಜ್ಯ ಬಜೆಟ್‌ 2024 ನೀರಸ ಬಜೆಟ್‌ ಆಗಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ನಾಯಕರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. “ಏನಿಲ್ಲಾ ಏನಿಲ್ಲಾ …ಸಿದ್ದರಾಮಯ್ಯ ಬಜೆಟ್‌ ನಲ್ಲಿ ಏನಿಲ್ಲ” ಎಂಬ ಉಪೇಂದ್ರ ಸಿನಿಮಾದ ಗೀತೆಯೊಂದಿಗೆ “ಬರೀ ಓಳು ಬರೀ ಓಳು “ ಗೀತೆಯನ್ನೂ ಹಾಡುತ್ತಾ ಉಭಯಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದರು. 
 
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ, ಸಿಎಂ ಇಂಂದು ಮಂಡಿಸಿರುವ ಬಜೆಟ್‌ ರೈತವಿರೋಧಿ ಬಜೆಟ್‌ ಆಗಿದೆ. ರಾಜ್ಯದ ಅಭಿವೃದ್ಧಿಯನ್ನು 20 ವರ್ಷ ಹಿಂದಕ್ಕೆ ಕೊಂಡೊಯ್ಯಲಿದೆ. ಈ ಬಜೆಟ್‌ ನಲ್ಲಿ ಯುವಕರಿಗೆ ಯಾವುದೇ ಯೋಜನೆ ಘೋಷಿಸಿಲ್ಲ ಎಂದರು. 

ಜೊತೆಗೆ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮತ್ತು ತಮ್ಮ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳಲು ಸಿಎಂ ತಮ್ಮ ಸಮಯ ವ್ಯರ್ಥಮಾಡಿದ್ದಾರೆ ಎಂದು ಟೀಕಿಸಿದ ಬಿ.ವೈ.ವಿಜಯೇಂದ್ರ, ಬಜೆಟ್‌ ನ ಪಾವಿತ್ರ್ಯತೆಯನ್ನು ಹಾಳು ಮಾಡುವುದರೊಂದಿಗೆ ಕೇಂದ್ರ ಸರ್ಕಾರವನ್ನು ದೂರುವ ಕೆಲಸ ಮಾಡಿದ್ದಾರೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸೋದ್ಯಮಕ್ಕೆ ಒತ್ತು – ಸಿಎಂ ಸಿದ್ದರಾಮಯ್ಯ