Select Your Language

Notifications

webdunia
webdunia
webdunia
webdunia

ವೃದ್ಧೆಯ ಕೈಕಾಲು ಕಟ್ಟಿ ಮನೆ ದೋಚಿದ್ದ ರೌಡಿಶೀಟರ್ ಬಂಧನ

 ಬಂಧನ

geetha

bangalore , ಗುರುವಾರ, 18 ಜನವರಿ 2024 (20:14 IST)
ಬೆಂಗಳೂರು : ಹಾಡಹಗಲೇ ಜನವರಿ 9ರ ಸಂಜೆ ಮೊಮ್ಮಕ್ಕಳನ್ನು ಟ್ಯೂಷನ್ ಬಿಟ್ಟು ಮನೆಗೆ ಬಂದಿದ್ದ ಗೌರಮ್ಮ ಮನೆಯ ಬಾಗಿಲು ಒಳಗೆ ಹೋಗುವಷ್ಟರಲ್ಲಿ ಬಂದಿದ್ದ ದರೋಡೆಕೋರರು, ಆಕೆಯ ಕೈಕಾಲು ಕಟ್ಟಿ ಬಾಯಿಗೆ ಮಂಕಿ ಕ್ಯಾಪ್ ತುರುಕಿದ್ದರು. ಬಳಿಕ ಮನೆಯಲ್ಲಿದ್ದ 120 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, 50 ಸಾವಿರ ನಗದು ದರೋಡೆ ಮಾಡಿ ಎಸ್ಕೆಪ್ ಆಗಿದ್ದರು. ಇನ್ನೂ ದೊಡ್ಡೆ ಕುಮಾರ ವೃದ್ಧೆ ಕುಟುಂಬಕ್ಕೆ ಪರಿಚಯಸ್ಥ ಎಂದು ಹೇಳಲಾಗ್ತಿದೆ.

ಒಂಟಿ ವೃದ್ಧೆಯ ಕೈ ಕಾಲು ಕಟ್ಟಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ್ದ ಪ್ರಕರಣದ ಓರ್ವ ಆರೋಪಿಯನ್ನ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ರೌಡಿ ಆಸಾಮಿಯಾಗಿರುವ ಕುಮಾರ ಅಲಿಯಾಸ್ ಲೊಡ್ಡೆ ಕುಮಾರ (30) ಎಂಬಾತನನ್ನ ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಜನವರಿ 9ರಂದು ರಾಜರಾಜೇಶ್ವರಿ ನಗರದ ಗೌರಮ್ಮ ಎಂಬುವವರ ಮನೆಗೆ ನುಗ್ಗಿದ್ದ ಆರೋಪಿಗಳ ತಂಡ, ಆಕೆಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ದರೋಡೆ ಮಾಡಿ ಪರಾರಿಯಾಗಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕಿಡ್ನ್ಯಾಪ್ ಆಗಿದ್ದ ಹಿಂದೂ ಯುವತಿ ಗೋವಾದಲ್ಲಿ ಪತ್ತೆ!