Select Your Language

Notifications

webdunia
webdunia
webdunia
webdunia

ಖಾಕಿ ಚಡ್ಡಿಗಳೇ ದೇಶದ ಮೊದಲ ಭಯೋತ್ಪಾದಕರು!

ಖಾಕಿ ಚಡ್ಡಿಗಳೇ ದೇಶದ ಮೊದಲ ಭಯೋತ್ಪಾದಕರು!
ಬೆಂಗಳೂರು , ಬುಧವಾರ, 22 ಫೆಬ್ರವರಿ 2023 (11:01 IST)
ಬೆಂಗಳೂರು : ಖಾಕಿ ಚಡ್ಡಿ ಹಾಕಿಕೊಂಡು ತಲೆ ಮೇಲೆ ಕಪ್ಪು ಟೋಪಿ ಹೇರಿಕೊಂಡವರು ಅಲ್ಲದೇ ನಾಥೂರಾಮ್ ಘೋಡ್ಸೆಅಂಥವರು ಈ ಭಾರತ ದೇಶದ ಮೊದಲ ಭಯೋತ್ಪಾದಕರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
 
ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು ಕನ್ನಡಿಗರ ದುರದೃಷ್ಟ. ನಮ್ಮ ಈ ಕರ್ನಾಟಕ ರಾಜ್ಯದಲ್ಲಿ ಮುಖಮಂತ್ರಿ ಎನ್ನುವ ಘನ ಹುದ್ದೆಗೆ ಬೆಲೆ ಅನ್ನೋದೇ ಇಲ್ಲ. ಈ ರಾಜ್ಯದ ಅಧಿಕಾರದ ಸೂತ್ರವಿರುವುದೇ ಕೇಶವಕೃಪದಲ್ಲಿ ಎಂದು ಹರಿಪ್ರಸಾದ್ ನಡೆಸುವ ಚಕ್ರವ್ಯೂಹ (ಭಾನುವಾರ ಆಗಸ್ಟ್ 19) ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಖಾಕಿ ಚಡ್ಡಿ, ಕಪ್ಪು ಟೋಪಿ, ಕೈಯಲ್ಲೊಂದು ಕೋಲು ಹಿಡಿದುಕೊಂಡರೆ ತಾವೇ ದೇಶಭಕ್ತರು, ತಮ್ಮನ್ನು ಬಿಟ್ಟರೆ ದೇಶವನ್ನು ಕಾಯುವವರು ಯಾರೂ ಇಲ್ಲ ಎನ್ನುವ ಭಾವನೆ ಖಾಕಿ ಚಡ್ಡಿ ಮುಖಂಡರಿಗೆ ಇದೆ. ಜನರ ಧಾರ್ಮಿಕ ಭಾವನೆಗಳ ಜೊತೆ ಆಟವಾಡುವ ಇವರೇ ದೇಶದ ಮೊದಲ ಉಗ್ರರು ಎಂದು ಹರಿಪ್ರಸಾದ್ ಖSS ಸಂಘಟನೆಯ ವಿರುದ್ದ ಕಿಡಿಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿಲ್ಲರೆ ನೀಡದ ಕಂಡಕ್ಟರ್ : ನ್ಯಾಯಾಲಯದ ಮೆಟ್ಟಿಲೇರಿದ ಪ್ರಯಾಣಿಕ