Select Your Language

Notifications

webdunia
webdunia
webdunia
webdunia

ಶಾರೀಕ್ ಜಾತಕ ಕೆದಕಿದ ಖಾಕಿ ಪಡೆ

ಶಾರೀಕ್ ಜಾತಕ ಕೆದಕಿದ ಖಾಕಿ ಪಡೆ
magaluru , ಮಂಗಳವಾರ, 22 ನವೆಂಬರ್ 2022 (19:11 IST)
ಕುಕ್ಕರ್​​​ ಬಾಂಬ್​​​​ ಸ್ಫೋಟಕ್ಕೆ ತಯಾರಿ ನಡೆಸಿದ್ದ ಉಗ್ರ ಶಾರೀಕ್ ಜಾತಕವನ್ನು ಪೊಲೀಸರು ಕೆದಕಿದ್ದು,  ಭಯಾನಕ ಮಾಹಿತಿ ಬಹಿರಂಗವಾಗಿದೆ. ಈತ ಬಾಂಬ್​ ತಯಾರಿಕೆಯಲ್ಲಿ ಸಿದ್ಧಹಸ್ತನಾಗಿದ್ದ ಎಂದು ತಿಳಿದು ಬಂದಿದೆ. ಈತ ಬೇರೆಯವರಿಗೆ ಬಾಂಬ್ ತಯಾರಿಸುವುದು ಹೇಗೆಂದು ಟ್ರೈನಿಂಗ್ ಕೂಡಾ ಕೊಡ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಶಾರಿಕ್​​​ ಐಸಿಸ್​ನ ಅಧಿಕೃತ ಮಾಧ್ಯಮ ಕೇಂದ್ರ ಅಲ್ - ಹಯಾತ್​ನಲ್ಲಿ​ ಸಕ್ರಿಯವಾಗಿದ್ದ. ಅಲ್​ ಹಯಾತ್​ ಸದಸ್ಯರಾಗಿದ್ದ ಇಬ್ಬರು ಸಹಚರರಿಗೆ ಶಾರೀಕ್ ಟ್ರೈನಿಂಗ್ ಕೂಡ ನೀಡಿದ್ನಂತೆ. ಟೆಲಿಗ್ರಾಮ್, ಇನ್​ಸ್ಟಾಗ್ರಾಮ್, ವೈರ್, ಎಲಿಮೆಂಟ್​ ಆ್ಯಪ್​ಗಳಲ್ಲಿ  ಬಾಂಬ್ ತಯಾರಿಸುವ ವಿಡಿಯೋಗಳನ್ನು, PDF ದಾಖಲೆಗಳನ್ನೂ ಆತ ಹಂಚಿಕೊಂಡಿದ್ದ. ISIS, ಭಯೋತ್ಪಾದನೆ ಕೆಲಸಗಳಿಗೆ ಸಂಬಂಧಿಸಿದ ಆಡಿಯೋ, ವಿಡಿಯೋ ಲಿಂಕ್​​ಗಳನ್ನು ಆತ ಶೇರ್​​ ಮಾಡಿದ್ದ. ಶಾರೀಕ್​​​ ಯಾಸಿನ್​ ಜೊತೆ ಸತತ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ತಿಳಿದು ಬಂದಿದೆ. ಶಿವಮೊಗ್ಗದ ತುಂಗಾ ನದಿ ದಡದಲ್ಲಿ ಬಾಂಬ್​ ಪ್ರಾಯೋಗಿಕ ಸ್ಫೋಟ ಯಶಸ್ವಿಗೊಳಿಸಿದ್ದು, ವಿಧ್ವಂಸಕ ಕೃತ್ಯಗಳ ಮೂಲಕ ಜನರಲ್ಲಿ ಭಯ ಹುಟ್ಟುಹಾಕಲು ಕಿರಾತಕ ಪ್ಲ್ಯಾನ್ ಮಾಡ್ಕೊಂಡಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಕ್ರಿಪ್ಟೊ ಕರೆನ್ಸಿ ಮೂಲಕ ಉಗ್ರ ಶಾರೀಕ್ ವ್ಯವಹರಿಸುತ್ತಿದ್ದು, ಸಹಚರರಿಗೆ ಕ್ರಿಪ್ಟೊ ಕರೆನ್ಸಿ ರೂಪದಲ್ಲಿ ಹಣ ವರ್ಗಾವಣೆ ಮಾಡ್ತಿದ್ದ. ಶಾರೀಕ್​​ಗೆ ಮುಸ್ಲಿಂ ರಾಷ್ಟ್ರಗಳಿಂದ ಲಕ್ಷ ಲಕ್ಷ ಹಣ  ಹರಿದು ಬರ್ತಿದ್ದು, ಶಾರೀಕ್ ಸಹೋದರಿ ಅಕೌಂಟಿಗೆ ಬಯಸಿದಾಗಲೆಲ್ಲಾ ಹಣ ಬರ್ತಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂವರು ಚುನಾವಣಾಧಿಕಾರಿಗಳ ಅಮಾನತು