ಲಾರಿ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಳಗಲಿ ಕ್ರಾಸ್ ಬಳಿ ನಡೆದಿದೆ. 29 ವರ್ಷದ ಮಹಮ್ಮದ್ ನವಾಜ್ ಮೃತ ದುರ್ದೈವಿ. ಅಪಘಾತದ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಅಪಘಾತದ ನಂತರ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಮೃತ ಮಹಮ್ಮದ್ ನವಾಜ್ ಹುಬ್ಬಳ್ಳಿಯ ತಬೀಬ್ ಲ್ಯಾಂಡ್ನ ನಿವಾಸಿಯಾಗಿದ್ದು, ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.