Publish Date: Sun, 20 Nov 2022 (21:03 IST)
Updated Date: Sun, 20 Nov 2022 (21:05 IST)
ಚಿಲುಮೆ ಸಂಸ್ಥೆಯಿಂದ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಅಕ್ರಮ ಸಂಬಂಧ ಈವರೆಗೂ ಮೂವರನ್ನು ಬಂಧಿಸಿ 15ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಈವರೆಗೆ ಮೂವರನ್ನ ಬಂಧಿಸಿ 15ಕ್ಕೂ ಹೆಚ್ಚು ಜನರನ್ನ ವಿಚಾರಣೆ ಮಾಡಲಾಗಿದೆ. ನಾಳೆಯಿಂದ ಬಿಬಿಎಂಪಿ ಅಧಿಕಾರಿಗಳನ್ನೂ ವಿಚಾರಣೆ ಮಾಡುತ್ತೇವೆ. ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಕೆಂಪೇಗೌಡ ವಿಚಾರಣೆ ವೇಳೆ ಹಣವನ್ನ ಬೇರೆ ರೀತಿಯಾಗಿ ಬಳಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಪ್ರಮುಖ ಆರೋಪಿಗಾಗಿ ರವಿಕುಮಾರ್ ಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಆ್ಯಪ್ ಓಪನ್ ಆಗದಂತೆ ಸರ್ವರ್ ಡೌನ್ ಮಾಡಿದ್ದಾರೆ. ಅದನ್ನ ಓಪನ್ ಮಾಡಿಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ. ಆ್ಯಪ್ ಡೆವಲಪ್ ಮಾಡಿರುವವರನ್ನು ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.