Select Your Language

Notifications

webdunia
webdunia
webdunia
webdunia

ಮಂಗಳೂರು ಘಟನೆ ಖಂಡಿಸಿದ ಮಾಜಿ ಸಚಿವ ಜಿ ಪರಮೇಶ್ವರ್

ಮಂಗಳೂರು ಘಟನೆ ಖಂಡಿಸಿದ ಮಾಜಿ ಸಚಿವ ಜಿ ಪರಮೇಶ್ವರ್
bangalore , ಭಾನುವಾರ, 20 ನವೆಂಬರ್ 2022 (20:17 IST)
ಮಂಗಳೂರು ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆಯನ್ನು ನಡೆಸಬೇಕು ಎಂದು ಮಾಜಿ ಗೃಹ ಸಚಿವ ಜಿ ಪರಮೇಶ್ವರ್ ಒತ್ತಾಯಿಸಿದ್ದಾರೆ.ಬೆಂಗಳೂರರಿನ ಖಾಸಗಿ ಹೋಟೆಲ್ ನಲ್ಲಿ ಮಾತಾಡಿದ ಅವರು,ಮಂಗಳೂರಿನಲ್ಲಿ ಈ ಹಿಂದೆ ಇಂತಹ ಘಟನೆಗಳು ನಡೆದಿದ್ದವು. ಗೃಹ ಇಲಾಖೆ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿ ಎನ್ಐಎಗೆ ಪ್ರಕರಣವನ್ನು ಒಪ್ಪಿಸಬೇಕು ಎಂದರು.ಇನ್ನು ಇದೆ ವೇಳೆ ಚಿಲುಮೆ ಸಂಸ್ಥೆಗೆ ಕಾಂಗ್ರೆಸ್‌ನವರೇ ಅನುಮತಿ ಕೊಟ್ಟಿದ್ದರು ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಇದೊಂದು ಕಾಯಿಲೆಯಾಗಿದೆ. ಏನೇ ಆರೋಪ ಮಾಡಿದರೂ, ಕಾಂಗ್ರೆಸ್‌ನವರೂ ಮಾಡಿಲ್ವಾ ಎಂದು ಕೇಳುತ್ತಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಆಗಲಿ ಎಂದೇ ನಾವು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಎಲ್ಲದರ ಬಗ್ಗೆಯೂ ತನಿಖೆ ನಡೆಸಿದರೆ ಸತ್ಯಾಂಶ ಹೊರ ಬರಲಿದೆ. ತಮಗೆ ಬೇಕಾದಂತೆ ಮತದಾರರ ಹೆಸರು ಡಿಲೀಟ್ ಮಾಡುವುದು, ಮತದಾರರ ಪಟ್ಟಿ ಬದಲಾಯಿಸುವುದು ಬಿಜೆಪಿ ಮಾಡುತ್ತಿದೆ ಎಂದು ಜಿ ಪರಮೇಶ್ವರ್ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಕ್ಷೇತ್ರದಲ್ಲೂ 22 ಸಾವಿರ ಮತಗಳು ಡಿಲೀಟ್