Select Your Language

Notifications

webdunia
webdunia
webdunia
webdunia

ಈದ್ಗಾ ಮೈದಾನದ ಸುತ್ತ ಖಾಕಿ ಸರ್ಪಗಾವಲು

ಈದ್ಗಾ ಮೈದಾನದ ಸುತ್ತ ಖಾಕಿ ಸರ್ಪಗಾವಲು
ಹುಬ್ಬಳ್ಳಿ , ಗುರುವಾರ, 10 ನವೆಂಬರ್ 2022 (18:43 IST)
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಹಿನ್ನೆಲೆ ಮೈದಾನದಲ್ಲಿ ಪೊಲೀಸ್ ಬಿಗಿ ಭದ್ರತೆ  ವ್ಯವಸ್ಥೆ ಮಾಡಲಾಗಿದೆ.ಮೈದಾನದ ಹೊರಗೆ ಮತ್ತು ಒಳಗೆ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು.ಜಯಂತಿ ಆಚರಣೆಗೆ ಎಂಐಎಂ ಮುಖಂಡ ವಿಜಯ ಗುಂಟ್ರಾಳ ಗೆ ಅನುಮತಿ ನೀಡಿದ್ದು,ಟಿಪ್ಪು ಜಯಂತಿಗೆ ಅವಕಾಶ ಮಾಡುವಂತೆ ಮನವಿ ಮಾಡಿದ್ದ ಗುಂಟ್ರಾಳಗೆ ಹಲವು ಷರತ್ತುಗಳನ್ನು ವಿಧಿಸಿ ಪಾಲಿಕೆ ಅನುಮತಿ ಕೊಟ್ಟಿದೆ.10 ಸಾವಿರ ರೂಪಾಯಿ ಶುಲ್ಕ
 ಭರಿಸುವಂತೆ ಸೂಚನೆ ನೀಡಿದೆ. 20 ಅಡಿ ಉದ್ದ 30 ಅಡಿ ಅಗಲ ಪೆಂಡಾಲ್ ಹಾಕಲು ಮಾತ್ರ ಅವಕಾಶ ನೀಡಿದ್ದು,3#5 ಅಡಿ ಅಳತೆಯ ಟಿಪ್ಪು ಭಾವಚಿತ್ರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.ಇದರ ಹೊರತಾಗಿ ಬೇರೆ ಯಾವುದೇ ಬಾವುಟ, ಧ್ವಜ, ಭಾವಚಿತ್ರ ಪ್ರದರ್ಶಿಸುವಂತಿಲ್ಲ .
 
ಈದ್ಗಾ ಮೈದಾನದಲ್ಲಿರುವ ಆಸ್ತಿಗೆ ಯಾವುದೇ ಧಕ್ಕೆ ತರಬಾರದು.ಜಯಂತಿ ವೇಳೆ ಗಲಭೆ, ಗೊಂದಲಗಳಿಗೆ ಅವಕಾಶ ಮಾಡಬಾರದು .ಈ ರೀತಿ ಆಯೋಜಕರಿಗೆ ಪಾಲಿಕೆ ನಿಬಂಧನೆಗಳನ್ನು ವಿಧಿಸಿದೆ .ಟಿಪ್ಪು ಜಯಂತಿ ಮಧ್ಯಾಹ್ನ 12 ಗಂಟೆಗೆ ನಡೆಸಲು ಉದ್ದೇಶಿಸಿದೆ.ಈದ್ಗಾ ಮೈದಾನದಲ್ಲಿ ಅರ್ಧಭಾಗದಲ್ಲಿ ಮಾತ್ರ ಅನುಮತಿ ನೀಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ ವೈರಲ್