Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ ವೈರಲ್
ವಿಜಯಪುರ , ಗುರುವಾರ, 10 ನವೆಂಬರ್ 2022 (18:17 IST)
ನರೇಂದ್ರ ಮೋದಿ ಯತ್ನಾಳ ಸನಾತನ ಧರ್ಮದ ವಿರುದ್ಧ ಮಾತಾಡಿದರೇ ನಾಲಿಗೆ ಕತ್ತರಿಸುತ್ತೇವೆ.ಹಿಂದೂ ನಾಯಕರ ಬಗ್ಗೆ ಮಾತನಾಡಿದ್ರೆ ನಾಲಿಗೆ ಕಟ್ ಮಾಡಲು ಹಿಂದೆ ಸರಿಯಲ್ಲ.ಹಿಂದೂ ಶ್ರೀಗಳು, ಸಿಎಂ, ಶಾಸಕರ ಬಗ್ಗೆ ಮಾತನಾಡಿದ್ರೆ ಅಲ್ಲಿಯೇ ಬಂದು ನಾಲಿಗೆ ಕಟ್ ಮಾಡ್ತೀವಿ ಎಂದು ವಿಜಯಪುರದಲ್ಲಿ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಹೇಳಿದ್ದಾರೆ.
 
ನಗರದಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ  ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯನ ವಿವಾದಾತ್ಮಕ ಹೇಳಿಕೆಗೆ ತಲೆಯಾಡಿಸಿದ ಯತ್ನಾಳ ಭಾಷಣದ ವೇಳೆ ನಾಲಿಗೆ ಕಟ್ ಮಾಡುವ ಎಚ್ಚರಿಕೆಯನ್ನ ಶಿವರುದ್ರ ಬಾಗಲಕೋಟ ನೀಡಿದ್ದಾರೆ.
 
ವೀರಾವೇಷದ ಭಾಷಣ ಮಾಡುವ ವೇಳೆ ನಾಲಿಗೆ ಕತ್ತರಿಸುವ ಎಚ್ಚರಿಕೆ ನೀಡಿದ ಶಿವರುದ್ರ ಬಾಗಲಕೋಟದ  ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಕುರುಬ ನಾಯಕ ಮುಕುಡಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಧರಣಿ