Select Your Language

Notifications

webdunia
webdunia
webdunia
webdunia

ಗುಂಡಿಮುಚ್ಚುವ ಕೆಲಸಕ್ಕೆ ಕೈ ಜೋಡಿಸಿದ ಸಾರ್ವಜನಿಕರು- ಗುಂಡಿಮುಕ್ತ ದಾವಣಗೆರೆ

ಗುಂಡಿಮುಚ್ಚುವ ಕೆಲಸಕ್ಕೆ ಕೈ ಜೋಡಿಸಿದ ಸಾರ್ವಜನಿಕರು- ಗುಂಡಿಮುಕ್ತ ದಾವಣಗೆರೆ
ದಾವಣಗೆರೆ , ಗುರುವಾರ, 10 ನವೆಂಬರ್ 2022 (17:44 IST)
ಗುಂಡಿ ಮುಚ್ಚುವ ಅಭಿಯಾನಕ್ಕೆ ದಾವಣಗೆರೆ ಗೆಳೆಯರು ಕೈ ಜೋಡಿಸಿದ್ದಾರೆ.ಗುಂಡಿ ಮುಕ್ತ ನಗರವನ್ನಾಗಿ ಮಾಡೋಣ ಬನ್ನಿ ಎಂಬ ಧ್ಯೇಯ ವಾಕ್ಯದೊಂದಿಗೆ ಗೆಳೆಯರು ಸಹಕರಿಸಲು ಮುಂದಾದರು.ಮೊದಲ ಹಂತದಲ್ಲಿ ರೇಣುಕಾ ಮಂದಿರ ಪಕ್ಕದ ರೈಲ್ವೆ ಕೆಳಸೇತುವೆ ಬಳಿಯಿದ್ದ ಗುಂಡಿ ಮುಚ್ಚುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
 
ಬುಧವಾರ ರಾತ್ರಿ 11 ಗಂಟೆಯಿಂದ 12 ಗಂಟೆಯವರೆಗೆ ದೊಡ್ಡದಾದ ಗುಂಡಿಯನ್ನ ಸ್ನೇಹಿತರು ಮುಚ್ಚಿದ್ದಾರೆ.ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚಲು ಜಲ್ಲಿ , ಸಿಮೆಂಟ್ , ಎಂ ಸ್ಯಾಂಡ್, ಗೆಳೆಯರು ಖರೀದಿಸಿದಾರೆ.ಗುಂಡಿ ಮುಚ್ಚಲು ಅವರಿಗೆ ಚಲಕೆ, ಕೋಡಪಾನ, ಬ್ರಷ್ ನೀಡಿ ಸಾರ್ವಜನಿಕರು ಕೂಡ ಸಹಕರಿಸಿದಾರೆ.ಗುಂಡಿ ಇರುವ ಮಾಹಿತಿ ತಿಳಿಸುವಂತೆ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
 
ದಾವಣಗೆರೆ ನಗರದಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಸಹಕರಿಸಿ ಎಂದು ಮನವಿ ಮಾಡಿದ್ದು,ಅಲ್ಲದೇ ದಾವಣಗೆರೆ ಟೀಮ್ ನವರಾದ ಎಂ ಜಿ ಶ್ರೀಕಾಂತ್. ರೋಹಿತ್ ಜೈನ್. ದೀಪಕ್ ಜೈನ್. ನಿಧಿ. ನವೀನ್ ಕುಮಾರ್ ಆರ್ ಎ ದತ್ತಾತ್ರೇಯ. ಯುವರಾಜ್. ಮೇಘರಾಜ್ ಅಭಿಯಾನದಲ್ಲಿ ಭಾಗಿಯಾಗಿ ಗುಂಡಿಮುಚ್ಚುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಇಲಾಖೆಯಿಂದ ಒಂದರ ಮೇಲೊಂದು ಎಡವಟ್ಟು