Select Your Language

Notifications

webdunia
webdunia
webdunia
webdunia

ಕರಡು ಮತದಾರರ ಪಟ್ಟಿ ಪ್ರಕಟಿಸಿದ ಬಿಬಿಎಂಪಿ

ಕರಡು ಮತದಾರರ ಪಟ್ಟಿ ಪ್ರಕಟಿಸಿದ ಬಿಬಿಎಂಪಿ
bangalore , ಗುರುವಾರ, 10 ನವೆಂಬರ್ 2022 (14:52 IST)
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಬಿಎಂಪಿ  ಚುನಾವಣೆಗೆ ಮತದಾರರ ಕರಡುಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ವಾರ್ಡ್ ಕಚೇರಿಗಳಲ್ಲಿ ಪಟ್ಟಿ ಪ್ರಕಟಿಸಲಾಗಿದೆ. ಸಾರ್ವಜನಿಕರಿಗೆ ಮತದಾರರ ಪಟ್ಟಿ ಪರಿಶೀಲಿಸಲು ಅವಕಾಶ ನೀಡಲಾಗಿದೆ. ತಮ್ಮ ಮೊಬೈಲ್ನಲ್ಲಿ VHA ಆ್ಯಪ್ ಅಥವಾ NVSP ವೆಬ್ಸೈಟ್ ಮೂಲಕ ಮಾಹಿತಿ ಪಡೆಯಬಹುದಾಗಿದೆ. e-EPIC download ಮಾಡಿಕೊಳ್ಳಲು ಇನ್ನಿತರ ಮತಗಟ್ಟೆ, ಶೇಖಡಾವಾರು ಮತದಾನದ ಮಾಹಿತಿ ಪಡೆಯಬಹುದು. ಈ ಹಿಂದೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8614 ಮತಗಟ್ಟೆಗಳಿದ್ದವು. ಪ್ರಸ್ತುತ 8615 ಮತಗಟ್ಟೆಗಳಿವೆ. ಮತದಾರರ ಪಟ್ಟಿಯಲ್ಲಿ ದೋಷಗಳಿದ್ದರೆ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳು ಅವಕಾಶ ಇದೆ. ಅಂದರೆ 8-12-22 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅಂತಿಮ‌ ಮತದಾರರ ಪಟ್ಟಿಯನ್ನು 5-1-2023 ಕ್ಕೆ ಪ್ರಕಟಿಸಲಾಗುತ್ತೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಆಗಮನ ಹಿನ್ನಲೆ ನಗರದ ಹಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ