Select Your Language

Notifications

webdunia
webdunia
webdunia
webdunia

ನ.15ರಂದು ಬಹುದೊಡ್ಡ ಘೋಷಣೆ-ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Big announcement on Nov. 15
ಅಮೆರಿಕ , ಗುರುವಾರ, 10 ನವೆಂಬರ್ 2022 (14:39 IST)
ಮುಂದಿನ ವಾರ ನವೆಂಬರ್ 15ರಂದು ಬಹುದೊಡ್ಡ ಘೋಷಣೆಯನ್ನು ಮಾಡಲಿದ್ದೇನೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಜನತೆಗೆ ತೀವ್ರ ಕುತೂಹಲ ಮೂಡಿಸಿದ್ದಾರೆ. 2024ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಘೋಷಣೆಯಿರುತ್ತದೆಯೇ ಎಂಬ ಕುತೂಹಲ ಮನೆಮಾಡಿದೆ. ತಾವು ಮುಂದಿನ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಈ ನಿಟ್ಟಿನಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ಯೋಜನೆಯನ್ನು, ತೀವ್ರ ಪ್ರಚಾರ ಕೈಗೊಳ್ಳುವ ಯೋಜನೆಯನ್ನು ಇತ್ತೀಚೆಗೆ ಅಮೆರಿಕ ಸಂಸತ್ತಿನ ಮಧ್ಯಂತರ ಅವಧಿಯ ಚುನಾವಣೆಗೆ ಮುನ್ನ ಪ್ರಚಾರದಲ್ಲಿ ಹೇಳಿದ್ದರು. ಅವರು ಸೆನೆಟ್ ಅಭ್ಯರ್ಥಿ ಜೆಡಿ ವಾನ್ಸೆ ಪರ ಮಧ್ಯಂತರ ಅವಧಿಯ ಚುನಾವಣೆಗೆ ಪ್ರಚಾರ ನಡೆಸುವ ವೇಳೆ ಹೀಗೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಸಿವಿನಿಂದ ಮೂಕಪ್ರಾಣಿಯ ರೋಧನೆ ರೋದನೆ