Select Your Language

Notifications

webdunia
webdunia
webdunia
webdunia

ಸಚ್ಚಿದಾನಂದ ಮೂರ್ತಿಗೆ ಖಾಕಿ ನೋಟಿಸ್​

Khaki notice to Satchidananda Murthy
bangalore , ಮಂಗಳವಾರ, 1 ನವೆಂಬರ್ 2022 (17:15 IST)
ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್ ದಿನದಿಂದ ದಿನಕ್ಕೆ ಹೊಸ ತಿರುವವನ್ನು ಪಡೆದುಕೊಳ್ಳುತ್ತಿದ್ದು, ಪ್ರಕರಣ ಸಂಬಂಧ ವೀರಶೈವ ಸಮಾಜದ ಮುಖಂಡ ಸಚ್ಚಿದಾನಂದ ಮೂರ್ತಿಗೆ ನೋಟಿಸ್ ನೀಡಲಾಗಿದೆ. ಡೆತ್ ನೋಟ್​​​ನಲ್ಲಿ ಸಚ್ಚಿದಾನಂದ ಮೂರ್ತಿ ಹೆಸರು ಪ್ರಸ್ತಾಪ ಮಾಡಲಾಗಿರುವ ಹಿನ್ನೆಲೆಯಲ್ಲಿ ಮಾಗಡಿ ಪೋಲಿಸರು ಸಚ್ಚಿದಾನಂದ ಮೂರ್ತಿಗೆ ನೋಟಿಸ್ ನೀಡಿದ್ದಾರೆ. ಶ್ರೀಗಳ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಚ್ಚಿದಾನಂದ ಮೂರ್ತಿಗೆ ಪೋಲಿಸರು ನೋಟಿಸ್ ನೀಡಲಾಗಿದೆ. A1 ಆರೋಪಿ‌‌ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ A2 ಆರೋಪಿ ನೀಲಾಂಬಿಕೆ, A3 ಆರೋಪಿ ವಕೀಲ ಮಹದೇವಯ್ಯ ಹನಿಟ್ರ್ಯಾಪ್ ರೋಚಕ ಕಥೆ ಬಿಚ್ಚಿಟ್ಟಿದ್ದಾರೆ. ಮತ್ತಷ್ಟು ಸ್ವಾಮೀಜಿಗಳ ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಠದಲ್ಲೇ ಹನಿಟ್ರ್ಯಾಪ್ ವಿಡಿಯೋ ಎಡಿಟಿಂಗ್ ನಡೆಯುತ್ತಿತ್ತು ಎಂಬ ರೋಚಕ ಮಾಹಿತಿ ವಿಚಾರಣೆ ವೇಳೆ ಬಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದವರ ಬಂಧನ