Publish Date: Sun, 29 Sep 2019 (17:27 IST)
Updated Date: Sun, 29 Sep 2019 (17:29 IST)
ಪೊಲೀಸ್ ಎಂದರೆ ಆರಕ್ಷಕರು ಎನ್ನಲಾಗುತ್ತಿದೆ. ಕಾನೂನು ಕಾಯಬೇಕಿದ್ದ ಪೊಲೀಸ್ ರಲ್ಲಿ ಕೆಲವರು ದುರಾಸೆ ಹೊಂದಿರೋದ್ರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಪೊಲೀಸರೇ ಕೆಜಿ ಕೆಜಿ ಚಿನ್ನವನ್ನು ದರೋಡೆ ಮಾಡಿರೋ ಘಟನೆ ವರದಿಯಾಗಿದೆ.
ನಾಲ್ವರು ಉದ್ಯಮಿಗಳು ದುಬೈನಿಂದ ಬಂದಿದ್ದರು. ಅವರ ಕಾರನ್ನು ಅಡ್ಡಗಟ್ಟಿದ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಕೂಡಿಹಾಕಿ ಅವರ ಬಳಿಯಿದ್ದ 2 ಕೆ ಜಿ ಚಿನ್ನ ಹಾಗೂ ವಿದೇಶಿ ವಸ್ತುಗಳು, ನಗದನ್ನು ದೋಚಿದ್ದಾರೆ.
ಪಂಜಾಬ್ ನಲ್ಲಿ ಈ ಘಟನೆ ನಡೆದಿದ್ದು, ಮೌರ ಮಂಡಿ ಸ್ಟೇಷನ್ ನ ಆಫೀಸರ್ ಹಾಗೂ ತಂಡದವರು, ರಾಜಸ್ಥಾನದ ನಾಲ್ವರು ನಿವಾಸಿಗಳನ್ನು ಹೆದರಿಸಿ ಚಿನ್ನ ದೋಚಿದ್ದಾರೆ. ಪೊಲೀಸ್ ರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.