ಕರ್ನಾಟಕದಲ್ಲೂ ಮಹಾರಾಷ್ಟ್ರ ಮಾದರಿ ಮೈತ್ರಿಗೆ ಯತ್ನ- ಕೆಸಿ ವೇಣುಗೋಪಾಲ್

ಸೋಮವಾರ, 2 ಡಿಸೆಂಬರ್ 2019 (11:41 IST)
ಬೆಳಗಾವಿ : ಉಪಚುನಾವಣೆಯ ನಂತರ ಕರ್ನಾಟಕದಲ್ಲೂ ಮಹಾರಾಷ್ಟ್ರ ಮಾದರಿ ಮೈತ್ರಿಗೆ ಯತ್ನಿಸಲಾಗುವುದು ಎಂದು ಕೆಸಿ ವೇಣುಗೋಪಾಲ್ ಹೇಳಿದ್ದಾರೆ.ಉಪಚುನಾವಣೆಯ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕೆಸಿ ವೇಣುಗೋಪಾಲ್ ಅವರು, ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕದಲ್ಲೂ ಮಹಾರಾಷ್ಟ್ರ ಮಾದರಿ ಮೈತ್ರಿಗೆ ಯತ್ನಿಸಲಾಗುವುದು. ಅಧಿಕಾರದಿಂದ ಬಿಜೆಪಿಯನ್ನು ದೂರ ಇಡಲು ಕರ್ನಾಟಕದಲ್ಲಿ ಮತ್ತೆ ಮೈತ್ರಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.


ಆದರೆ ಜೆಡಿಎಸ್ ವರಿಷ್ಠರು ಯಾವುದೇ ಪಕ್ಷದ ಜೊತೆ ಮತ್ತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಬಗ್ಗೆ ಆಸಕ್ತಿ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮತದಾರರಿಗೆ ಕಮಲ ಚಿಹ್ನೆಯ ಪರಿಚಯಿಸಲು ಡಾ. ಕೆ.ಸುಧಾಕರ್ ಹರಸಾಹಸ