Publish Date: Mon, 02 Dec 2019 (08:41 IST)
Updated Date: Mon, 02 Dec 2019 (09:01 IST)
ಸೂರತ್: ಸತತ ಎರಡನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ನಲ್ಲಿ ತಮಿಳುನಾಡು ವಿರುದ್ಧ ರೋಚಕವಾಗಿ 1 ರನ್ ಗಳಿಂದ ಗೆಲುವು ದಾಖಲಿಸಿದೆ.
ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ ಗಳಲ್ಲಿ 180 ರನ್ ಪೇರಿಸಿತ್ತು. ಕೆಎಲ್ ರಾಹುಲ್ 22, ದೇವದತ್ತ ಪಡಿಕ್ಕಲ್ 32, ಮನೀಶ್ ಪಾಂಡೆ ಅಜೇಯ 60 ಮತ್ತು ರೋಹನ್ ಕದಮ್ 35 ರನ್ ಗಳಿಸಿದರು. ತಮಿಳುನಾಡು ಪರ ಆರ್ ಅಶ್ವಿನ್ 2, ಮುರುಗನ್ ಅಶ್ವಿನ್ 2 ಮತ್ತು ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ತಮಿಳುನಾಡು ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ‍್ಯಮ ಕ್ರಮಾಂಕದಲ್ಲಿ ಬಾಬಾ ಅಪರಾಜಿತ್ 40 ಮತ್ತು ವಿಜಯ್ ಶಂಕರ್ 44 ರನ್ ಗಳಿಸಿ ಅಪಾಯಕಾರಿಯಾದರು. ಆದರೆ ಕೊನೆಯ ಎಸೆತದಲ್ಲಿ ವಿಜಯ್ ಶಂಕರ್ ರನ್ನು ರನೌಟ್ ಮಾಡಿದ ಕರ್ನಾಟಕ ಆಟಗಾರರು 1 ರನ್ ಗಳಿಂದ ರೋಚಕವಾಗಿ ಪಂದ್ಯ ಗೆದ್ದುಕೊಂಡರು.