Publish Date: Sat, 30 Nov 2019 (10:06 IST)
Updated Date: Sat, 30 Nov 2019 (10:15 IST)
ಬೆಂಗಳೂರು: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ದೇವದತ್ತ ಪಡಿಕ್ಕಲ್ ಗೆ ಈ ಬಾರಿ ಐಪಿಎಲ್ ನಲ್ಲಿ ಅದೃಷ್ಟ ಖುಲಾಯಿಸಲಿದೆ.
ಕರ್ನಾಟಕ ಪರ ಅತ್ಯುತ್ತಮ ಆಟವಾಡುತ್ತಿರುವ ದೇವದತ್ತ ಪಡಿಕ್ಕಲ್ ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರ. ಆದರೆ ಕಳೆದ ಋತುವಿನಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಪಾರ್ಥಿವ್ ಪಟೇಲ್ ಬದಲಿಗೆ ದೇವದತ್ತ ಕೊಹ್ಲಿ ಜತೆಗೆ ಆರಂಭಿಕರಾಗುವ ಸುಳಿವನ್ನು ಆರ್ ಸಿಬಿ ನೀಡಿದೆ.
ತನ್ನ ಟ್ವಿಟರ್ ಪೇಜ್ ನಲ್ಲಿ ಪಾರ್ಥಿವ್ ಪಟೇಲ್ ಮತ್ತು ದೇವದತ್ತ ಪಡಿಕ್ಕಲ್ ಫೋಟೋ ಪ್ರಕಟಿಸಿ ಬೃಹತ್ ಮೊತ್ತ ಚೇಸ್ ಮಾಡುವ ಇವರಿಬ್ಬರಲ್ಲಿ ಯಾರು ಆರಂಭಿಕರಾಗಿ ಇರಬೇಕೆಂದು ಬಯಸುತ್ತೀರಿ ಎಂದು ಆರ್ ಸಿಬಿ ಪ್ರಶ್ನಿಸಿದೆ. ಹೀಗಾಗಿ ಈ ಋತುವಿನಲ್ಲಿ ಕರ್ನಾಟಕದ ಹುಡುಗನಿಗೆ ಅದೃಷ್ಟ ಖುಲಾಯಿಸುವುದು ಖಂಡಿತಾ ಎನ್ನಲಾಗಿದೆ.