Publish Date: Sat, 30 Nov 2019 (10:36 IST)
Updated Date: Sat, 30 Nov 2019 (10:38 IST)
ಮುಂಬೈ: ಧೋನಿ ಭವಿಷ್ಯದಲ್ಲಿ ಭಾರತದ ಪರ ಆಡ್ತಾರಾ, ನಿವೃತ್ತಿಯಾಗುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಧೋನಿ ಬಳಿ ಇದೇ ಪ್ರಶ್ನೆ ಕೇಳಿದಾಗ ಜನವರಿವರೆಗೆ ಏನನ್ನೂ ಕೇಳಬೇಡಿ ಎಂದಿದ್ದರು. ಇದೀಗ ಗಂಗೂಲಿ ಧೋನಿ ಭವಿಷ್ಯವೇನು ಎಂಬುದು ನಿರ್ಧಾರವಾಗಿದೆ ಎಂದಿದ್ದಾರೆ.
‘ಧೋನಿ ಭವಿಷ್ಯದ ಬಗ್ಗೆ ನಮಗೆ ಸ್ಪಷ್ಟತೆಯಿದೆ. ಆದರೆ ಅದನ್ನು ಸಾರ್ವಜನಿಕವಾಗಿ ಹೇಳಲಾಗದು. ಸಮಯ ಕಳೆದ ಮೇಲೆ ಎಲ್ಲವೂ ನಿಮಗೆ ಗೊತ್ತಾಗಲಿದೆ’ ಎಂದು ಗಂಗೂಲಿ ಹೇಳಿದ್ದಾರೆ.