Select Your Language

Notifications

webdunia
webdunia
webdunia
webdunia

ಅಜ್ಜ-ಅಜ್ಜಿಯ ಜತೆ ಮಯಾಂಕ್ ಅಗರ್ವಾಲ್ ಫೋಟೋ ವೈರಲ್

ಅಜ್ಜ-ಅಜ್ಜಿಯ ಜತೆ ಮಯಾಂಕ್ ಅಗರ್ವಾಲ್ ಫೋಟೋ ವೈರಲ್
ಬೆಂಗಳೂರು , ಗುರುವಾರ, 28 ನವೆಂಬರ್ 2019 (09:55 IST)
ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ತಮ್ಮ ಅಜ್ಜ-ಅಜ್ಜಿಯ ಜತೆಗೆ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದು, ಫುಲ್ ವೈರಲ್ ಆಗಿದೆ.


ಮಯಾಂಕ್ ಇದೀಗ ಬಿಡುವಿನ ವೇಳೆಯನ್ನು ತಮ್ಮ ಕುಟುಂಬದ ಜತೆಗೆ ಕಳೆಯುತ್ತಿದ್ದಾರೆ. ಈ ವೇಳೆ ತಮ್ಮ ಅಜ್ಜ ಮತ್ತು ಅಜ್ಜಿಯ ಜತೆಗೆ ವಾಕಿಂಗ್ ಮಾಡುತ್ತಿರುವ ಫೋಟೋ ಪ್ರಕಟಿಸಿದ್ದಲ್ಲದೆ, ಅವರ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಈಗಲೂ ಪ್ರತೀ ಪ್ರವಾಸ ಮುಗಿದ ಮೇಲೆ ನನ್ನ ಅಜ್ಜ-ಅಜ್ಜಿಯನ್ನು ಭೇಟಿಯಾಗಿ ಒಂದು ವಾಕಿಂಗ್ ಮಾಡುವೆ ಎಂದು ಮೊಮ್ಮಗ ಮಯಾಂಕ್ ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಹಿರಿಯ ಜೀವಗಳಿಗೆ ಗೌರವ ಕೊಡುವ ಮಯಾಂಕ್ ಬಗ್ಗೆ ಅಭಿಮಾನಿಗಳು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನವರಿವರೆಗೆ ನನ್ನ ಏನೂ ಕೇಳ್ಬೇಡಿ ಎಂದು ತಾಕೀತು ಮಾಡಿದ ಧೋನಿ