Publish Date: Sat, 30 Nov 2019 (08:59 IST)
Updated Date: Sat, 30 Nov 2019 (09:00 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಏಕದಿನ ಮತ್ತು ಟಿ20 ಸರಣಿ ಇನ್ನೇನು ಆರಂಭವಾಗಲಿದ್ದು, ಇದಕ್ಕೂ ಮೊದಲು ವಿಂಡೀಸ್ ಕ್ರಿಕೆಟಿಗ ಕಿರನ್ ಪೊಲ್ಲಾರ್ಡ್ ರೋಹಿತ್ ಶರ್ಮಾರನ್ನು ಕೆಣಕಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಆರಂಭವಾಗುವ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಪ್ರಕಟಿಸಿದ ಜಾಹೀರಾತಿನಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ರೋಹಿತ್ ರನ್ನು ಕಿರನ್ ಪೊಲ್ಲಾರ್ಡ್ ಫೋನ್ ಕರೆ ಮಾಡಿ ಎಚ್ಚರಿಸುವ ದೃಶ್ಯವಿದೆ. ಇದನ್ನು ಪ್ರಕಟಿಸಿದ ಕಿರನ್ ರೋಹಿತ್ ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಇಬ್ಬರೂ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುವವರಾದರೂ ಇತ್ತೀಚೆಗೆ ಇಬ್ಬರ ಸಂಬಂಧ ಹಳಸಿದ್ದು ಕಿರನ್ ಟ್ವಿಟರ್ ನಲ್ಲಿ ರೋಹಿತ್ ರನ್ನು ಅನ್ ಫಾಲೋ ಮಾಡಿದ್ದರು. ಇದೀಗ ಕಿರನ್ ಕೆಣಕಿದ ರೀತಿಗೆ ಪ್ರತಿಕ್ರಿಯಿಸಿರುವ ರೋಹಿತ್ ಸಿಟ್ಟಿನ ಇಮೋಜಿ ಪ್ರಕಟಿಸಿ ಕಿರನ್ ಪೊಲ್ಲಾರ್ಡ್ ಹೆಸರನ್ನು ಟ್ಯಾಗ್ ಮಾಡಿದ್ದಾರೆ. ಅಂತೂ ಸರಣಿಗೆ ಮೊದಲು ಈ ಇಬ್ಬರು ಆಟಗಾರರು ಪರಸ್ಪರ ಕೈ ಮಿಲಾಯಿಸಿಕೊಂಡಿದ್ದಾರೆ.