Select Your Language

Notifications

webdunia
webdunia
webdunia
webdunia

ಸೈಯದ್ ಮುಷ್ತಾಕ್ ಅಲಿ ಸೆಮಿಫೈನಲ್: ಕರ್ನಾಟಕಕ್ಕೆ ಹರ್ಯಾಣ ಎದುರಾಳಿ

webdunia
ಶುಕ್ರವಾರ, 29 ನವೆಂಬರ್ 2019 (09:46 IST)
ಬೆಂಗಳೂರು: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂದು ಕರ್ನಾಟಕ ಹರ್ಯಾಣವನ್ನು ಎದುರಿಸುತ್ತಿದೆ.


ಸೂರತ್ ನಲ್ಲಿ ಪಂದ್ಯ ನಡೆಯಲಿದ್ದು, ಟೂರ್ನಿಯಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ನೀಡಿರುವ ಕರ್ನಾಟಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಈಗಾಗಲೇ ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್, ಮನೀಶ್ ಪಾಂಡೆಯಿಂದಾಗಿ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಕರ್ನಾಟಕಕ್ಕೆ ಮಯಾಂಕ್ ಅಗರ್ವಾಲ್ ಸೇರ್ಪಡೆ ಮತ್ತಷ್ಟು ಚೈತನ್ಯ ನೀಡಿದೆ.

ಅತ್ತ ಹರ್ಯಾಣಗೆ ಯಜುವೇಂದ್ರ ಚಾಹಲ್, ಹರ್ಶಲ್ ಪಟೇಲ್, ಅಮಿತ್ ಮಿಶ್ರಾ ಬಲ ತುಂಬಲಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತರೂ ಕರ್ನಾಟಕ ಬಲಿಷ್ಠವಾಗಿಯೇ ಇದೆ. ಮಧ್ಯಾಹ್ನ 2.30 ಕ್ಕೆ ಪಂದ್ಯ ಆರಂಭವಾಗಲಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಕೆಎಲ್ ರಾಹುಲ್ ಬೆಂಬಲಕ್ಕೆ ಬಂದ ವಿವಿಎಸ್ ಲಕ್ಷ್ಮಣ್