ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪರಿಂದ ಅಬ್ಬರದ ಪ್ರಚಾರ

ಸೋಮವಾರ, 2 ಡಿಸೆಂಬರ್ 2019 (11:17 IST)
ಬೆಳಗಾವಿ : ಡಿಸೆಂಬರ್ 5 ರಂದು ಉಪಚುನಾವಣೆಯ ಹಿನ್ನಲೆಯಲ್ಲಿ ಇಂದು ಅಥಣಿ, ಕಾಗವಾಡ ಕ್ಷೇತ್ರದಲ್ಲಿಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ.


ಇಂದು ಮಧ್ಯಾಹ್ನ ಅಥಣಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಸಿಎಂ ಪ್ರಚಾರ ಮಾಡಲಿದ್ದಾರೆ. ಬಳಿಕ ಕಾಗವಾಡ ಬಿಜೆಪಿ ಪ್ರಚಾರ ಸಭೆಯಲ್ಲಿ ಸಿಎಂ ಭಾಗಿಯಾಗಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಪ್ರಚಾರ ಮಾಡಲಿದ್ದಾರೆ.

 

ಪ್ರಚಾರ ಸಭೆಗೂ ಮುನ್ನ ಸಿಎಂ ಎಸ್ ವೈ , ಬಿಜೆಪಿ ಮುಖಂಡರು ಹಾಗೂ ಸಮುದಾಯಗಳ ಮುಖಂಡರ ಸಭೆ ನಡೆಸಲಿದ್ದಾರೆ. ಬೆಳಗಾವಿ ಜಿಲ್ಲೆಯ  ಅಥಣಿ ತಾಲೂಕಿನ  ಕೆಂಪವಾಡ ಗ್ರಾಮದ ಅಥಣಿ ಶುಗರ್ಸ್ ಗೆಸ್ಟ್ ಹೌಸ್ ನಲ್ಲಿ ಈ ಸಭೆ ನಡೆಯಲಿದೆ.
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿರ್ಭಯಾ ಅತ್ಯಾಚಾರಿಗೆ ಕ್ಷಮಾದಾನಕ್ಕೆ ವಿರೋಧ