Publish Date: Sun, 01 Dec 2019 (11:33 IST)
Updated Date: Sun, 01 Dec 2019 (11:46 IST)
ಬೆಂಗಳೂರು : ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಗಂಡಸ್ತನದ ಬಗ್ಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಹೇಶ್ ಕುಮಟಳ್ಳಿಯ ಗಂಡಸ್ತನದ ಬಗ್ಗೆ ಒಬ್ಬರು ಕೇಳಿದ್ದಾರೆ. ಕುಮಟಳ್ಳಿ ಸಿಎಂ ಮುಂದೆ ಗಂಡಸ್ತನವನ್ನು ತೋರಿಸಬೇಕಾ? ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಲೇವಡಿ ಮಾಡಿದ್ದಾರೆ.
1200 ಕೋಟಿ ರೂ ತಂದಿರುವುದಾಗಿ ಅವರು ಹೇಳಿದ್ದಾರೆ. ಹಾಗೇ ಮಾಡಿದ್ದೀನಿ, ಹೀಗೆ ಮಾಡಿದ್ದೀನಿ ಎಂದು ಹೇಳುತ್ತಾರೆ. ಹೌದವ್ವಾ ನಿನ್ನನ್ನು ನೋಡಿದ ತಕ್ಷಣ ಎಲ್ಲರೂ ಕೊಡುತ್ತಾರೆ. ಬೆಂಗಳೂರಿನಲ್ಲಿ ಏನು ನಡೆಯುತ್ತೆ ಎಂದು ನಮಗೆ ಗೊತ್ತಿಲ್ವಾ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ? ಮೊದಲು ರಮೇಶ್ ಸರ್ ಎಂದು ಲಕ್ಷ್ಮೀ ಕರೆಯುತ್ತಿದ್ದರು. ಈಗ ಡಿಕೆ ಸರ್ ಎಂದು ಯಾರಿಗೆ ಕೆಡವುತ್ತಾರೋ ಗೊತ್ತಿಲ್ಲ. ಕುಮಟಳ್ಳಿಗೆ ಹೇಳಿದಂತೆ ನನಗೆ ಹೇಳಿದ್ರೆ ಹೊಡೆದು ಬರ್ತಿದ್ದೆ ಎಂದು ಅವರು ಕಿಡಿಕಾರಿದ್ದಾರೆ.