ಸ್ವಗ್ರಾಮದಲ್ಲಿಯೇ ಮಹೇಶ್ ಕುಮಟಳ್ಳಿಗೆ ಶಾಕ್ ನೀಡಿದ ಮತದಾರರು

ಶುಕ್ರವಾರ, 29 ನವೆಂಬರ್ 2019 (11:31 IST)
ಅಥಣಿ : ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಸ್ವಗ್ರಾಮದ ಮತದಾರರು ಶಾಕ್ ನೀಡಿದ್ದಾರೆ.ಅನರ್ಹ ಶಾಸಕರಿಗೆ ನಮ್ಮ ಗ್ರಾಮದಲ್ಲಿ ಪ್ರವೇಶ ಇಲ್ಲ. ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರದಲ್ಲಿ ನಿಮಗೆ ಪ್ರವೇಶವಿಲ್ಲ. ಹಣಕ್ಕಾಗಿ ಶಾಸಕ ಸ್ಥಾನವನ್ನು ಮಾರಿಕೊಂಡವರಿಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಹಾಕುವುದರ ಮೂಲಕ ಮಹೇಶ್ ಕುಮಟಳ್ಳಿಯ ವಿರುದ್ಧ ಅವರ ಸ್ವಗ್ರಾಮವಾದ ತೆಲಸಂಗ ಗ್ರಾಮದ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಅಷ್ಟೆ ಅಲ್ಲದೇ ಸಂತೋಷ್ ಹೆಗ್ಡೆ ಫೋಟೋ ಹಾಕಿ ಸೋಲಿಸಲು ಅನರ್ಹರನ್ನು ಸೋಲಿಸುವಂತೆ ಬ್ಯಾನರ್ ಮೂಲಕ ಕರೆ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿದ್ದರಾಮಯ್ಯಂಗೆ ಬಹಿರಂಗವಾಗಿ ಸವಾಲು ಹಾಕಿದ ಸಚಿವ ಕೆ.ಎಸ್.ಈಶ್ವರಪ್ಪ