Select Your Language

Notifications

webdunia
webdunia
webdunia
webdunia

ಹೆಚ್.ಡಿ.ಕುಮಾರಸ್ವಾಮಿಗೆ ನೋಬೆಲ್ ಪ್ರಶಸ್ತಿ ಕೊಡಬೇಕೆಂದ ಸಚಿವ

ಬಿಜೆಪಿ
ಅಥಣಿ , ಶನಿವಾರ, 23 ನವೆಂಬರ್ 2019 (16:36 IST)
ಡಿ. 5 ರ ಬಳಿಕವೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಹೀಗಂತ ಮಾಜಿ ಡಿಸಿಎಂ ಹಾಗೂ ಸಚಿವರೊಬ್ಬರು ಹೇಳಿದ್ದಾರೆ.

ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿಗೆ ನೋಬೆಲ್ ಪ್ರಶಸ್ತಿ ಕೊಡಬೇಕು. ಬೈ ಎಲೆಕ್ಷನ್ ಬಳಿಕ ಸರಕಾರ ಪತನವಾಗಲಿದೆ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಅವರಪ್ಪ ಮತ್ತು ಮಗನನ್ನು ಗೆಲ್ಲಿಸಿಕೊಳ್ಳಲು ಎಚ್ ಡಿ‌ ಕೆ ಗೆ ಆಗಲಿಲ್ಲ. ಹೆಚ್. ಡಿ. ಕೆ. ಗೆ ನೋಬೆಲ್ ಪ್ರಶಸ್ತಿ ನೀಡಬೇಕು ಅಂತ ವ್ಯಂಗ್ಯವಾಡಿದ್ರು.

ಸರಕಾರ ಪತನ ಕುರಿತು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹೇಳುವುದೆಲ್ಲ ಸುಳ್ಳು. ಸಿದ್ದರಾಮಯ್ಯ ಹೆಸರು ಹೇಳಲೂ ನನಗೆ ಇಷ್ಟವಿಲ್ಲ. ಬೈ ಎಲೆಕ್ಷನ್ ಬಳಿಕ ಸಿದ್ದರಾಮಯ್ಯ ಪ್ರತಿಪಕ್ಷದ ಸ್ಥಾನದಲ್ಲೂ ಇರಲ್ಲ ಅಂತ ಅಥಣಿಯಲ್ಲಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿಕೆ  ನೀಡಿದ್ರು.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರಕಾರ ಉಳಿಬೇಕು ಅಂದ್ರೆ ಅನರ್ಹರು ಗೆಲ್ಲಲೇಬೇಕು ಎಂದ ಸಚಿವ