Publish Date: Sun, 03 Nov 2019 (12:31 IST)
Updated Date: Sun, 03 Nov 2019 (12:39 IST)
ಬೆಂಗಳೂರು : ನನ್ನ ಜೀವ ಹೋದ್ರೆ ಅದಕ್ಕೆ ಬಿಜೆಪಿ ಶಾಸಕರೊಬ್ಬರು ಹಾಗೂ ಪಿಎಸ್ ಐ ಕಾರಣವೆಂದು ಯುವಕನೊಬ್ಬ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ.
ಅಪ್ಪು ಪಟ್ಟಣದ ಶೆಟ್ಟಿ ಬೆಂಬಲಿಗನಾಗಿರುವ ಬಾಬು ಜಗದಾಳೆ ಎಂಬ ಯುವಕ ನಿನ್ನೆ ರಾತ್ರಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ನನ್ನ ಜೀವ ಹೋದ್ರೆ ಅದಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಪಿಎಸ್ ಐ ಶರಣಗೌಡ ಕಾರಣವೆಂದು ತಿಳಿಸಿದ್ದಾನೆ,
ನಿನಗೆ ಆಕ್ಸಿಡೆಂಟ್ ಮಾಡೋ ಪ್ಲಾನ್ ನಲ್ಲಿದ್ದಾರೆ ಎಂದಿರುವ ಪಿಎಸ್ ಐ, ನಿನ್ನ ಹೆಣ ಎತ್ಕೊಂಡು ಪ್ರತಿಭಟನೆ ಮಾಡ್ತಾರೆ.
ಯತ್ನಾಳ್ ಕೇಸ್ ನಲ್ಲಿ ಹುಚ್ಚುನಾಯಿಗೆ ಹೊಡೆದಂತೆ ಹೊಡೆದಿದ್ದಾರೆ ಎಂದು ಯುವಕ ಬಾಬು ತನ್ನ ಅಳಲು ತೋಡಿಕೊಂಡಿದ್ದಾನೆ.