ಮತದಾರರಿಗೆ ಕಮಲ ಚಿಹ್ನೆಯ ಪರಿಚಯಿಸಲು ಡಾ. ಕೆ.ಸುಧಾಕರ್ ಹರಸಾಹಸ

ಸೋಮವಾರ, 2 ಡಿಸೆಂಬರ್ 2019 (11:20 IST)
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ಹಿನ್ನಲೆ ಮತದಾರರಿಗೆ ಕಮಲ ಚಿಹ್ನೆ ಪರಿಚಯಕ್ಕೆ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಹರಸಾಹಸ ಮಾಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಡಾ. ಕೆ.ಸುಧಾಕರ್ ಇದೀಗ ಬಿಜೆಪಿಗೆ ಸೇರ್ಪಡೆಯಾಗಿ ಬೈಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೀಳಿಯುತ್ತಿರುವ  ಹಿನ್ನಲೆಯಲ್ಲಿ ಮತದಾರರಲ್ಲಿ ತಮ್ಮ ಚಿಹ್ನೆ ಕೈ ಅಲ್ಲ ಕಮಲ ಎಂದು ಪರಿಚಯಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಸಿನಿತಾರೆಯರ ಮೊರೆ ಹೋಗಿದ್ದಾರೆ.


ಸಿನಿ ತಾರೆಯರಾದ ನಟಿ ಹರ್ಷಿಕಾ ಪೊಣಚ್ಚ, ಹರಿಪ್ರಿಯ ಹಾಗೂ ನಟ ದಿಗಂತ್ ಅವರ ಮೂಲಕ ಮನೆಮನೆಗೆ ತೆರಳಿ ಕಮಲ ಚಿಹ್ನೆಯ ಬಗ್ಗೆ ಪರಿಚಯಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪರಿಂದ ಅಬ್ಬರದ ಪ್ರಚಾರ