ಆಚಾರ, ವಿಚಾರ ಪಾಠ ಹೇಳುವಷ್ಟು ದೊಡ್ಡವರಾ ಡಿಕೆಶಿ?- ಬಿ.ಸಿ.ಪಾಟೀಲ್ ವಾಗ್ದಾಳಿ

ಸೋಮವಾರ, 2 ಡಿಸೆಂಬರ್ 2019 (10:32 IST)
ಬೆಂಗಳೂರು : ಬಿ.ಸಿ ಪಾಟೀಲ್ ನೋಟು, ಬನ್ನಿಕೋಡಗೆ ವೋಟು ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಈ ಹೇಳಿಕೆ ನೀಡುವುದಕ್ಕೆ ಡಿಕೆಶಿ ಇಲ್ಲಿಗೆ ಬರಬೇಕಾಯಿತು ಎಂದು ಬಿ.ಸಿ.ಪಾಟೀಲ್ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.


ಆಚಾರ, ವಿಚಾರ ಪಾಠ ಹೇಳುವಷ್ಟು ದೊಡ್ಡವರಾ ಡಿಕೆಶಿ? ಅವರ ಹಿನ್ನಲೆ ಏನೆಂದು ಎಲ್ಲರಿಗೂ ಗೊತ್ತು. ಡಿಕೆಶಿ ಜೈಲಿಗೆ ಹೋಗಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಮಾಜಿ ಸಚಿವ ಡಿಕೆ ಶಿವಕುಮಾರ್ ದರ್ಪದಲ್ಲೇ ಇರುತ್ತಾರೆ ಎಂದು ಬಿ.ಸಿ.ಪಾಟೀಲ್ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

ಕಾಂಗ್ರೆಸ್, ಜೆಡಿಎಸ್ ನವರು ದಿನಕ್ಕೊಂದು ನಾಟಕ ಮಾಡ್ತಿದ್ದಾರೆ. ಅವರ ನಾಟಕಕ್ಕೆ ಶೀರ್ಷಿಕೆ ಕೊಡಲೂ ಜನರಿಗೆ ಆಗುತ್ತಿಲ್ಲ. ಬಣಕಾರ್, ನನ್ನ ಮಧ್ಯೆ ಗಜಳ ಹಚ್ಚುವ ಲೆಕ್ಕಚಾರದಲ್ಲಿದ್ದಾರೆ. ಆದ್ರೆ ಡಿಕೆಶಿ ಮಾತುಗಳು ಇಲ್ಲಿ ನಡೆಯುವುದಿಲ್ಲ.


ಹೆಚ್.ಡಿ.ಕುಮಾರಸ್ವಾಮಿ ನಾಲಗೆಗೆ ಏನಾದ್ರೂ ಹಿಡಿತ ಇದ್ಯಾ? ಅವರ ಇತಿಹಾಸ ಸರಿ ಇದ್ಯಾ? ಅವರು ಎರಡೆರಡು ಬಾರಿ ಸಿಎಂ ಆಗಿದ್ದಾರೆ. ಅವರ ಘನತೆ, ಗೌರವಕ್ಕೆ ತಕ್ಕಂತೆ ಮಾತನಾಡಬೇಕು ಎಂದು ಅವರು ಹೆಚ್.ಡಿ.ಕುಮಾರಸ್ವಾಮಿ ವಿರುದ್ದವೂ ಹರಿಹಾಯ್ದಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹನಿ ಟ್ರ್ಯಾಪ್ ಪ್ರಕರಣ ; ಕರಾವಳಿಯ ಹುಡುಗಿಯೊಂದಿಗೆ ಬೆಳಗಾವಿಯ ಅನರ್ಹ ಶಾಸಕನ ಅಶ್ಲೀಲ ಸಂಭಾಷಣೆ ಬಯಲು