Select Your Language

Notifications

webdunia
webdunia
webdunia
webdunia

ಸೌರವ್ ಗಂಗೂಲಿಗಾಗಿ ಬಿಸಿಸಿಐ ನಿಯಮವೇ ಬದಲು

ಸೌರವ್ ಗಂಗೂಲಿಗಾಗಿ ಬಿಸಿಸಿಐ ನಿಯಮವೇ ಬದಲು
ಮುಂಬೈ , ಸೋಮವಾರ, 2 ಡಿಸೆಂಬರ್ 2019 (10:00 IST)
ಮುಂಬೈ: ಲೋಧಾ ಸಮಿತಿ ನಿರ್ದೇಶನ ಮಾಡಿದ್ದ ಕಡ್ಡಾಯ ನಿವೃತ್ತಿ ನಿಯಮವನ್ನೇ ಬದಲಿಸಲು ಬಿಸಿಸಿಐ ಹೊರಟಿದೆ. ಈ ಮೂಲಕ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರಾವಧಿ ವಿಸ್ತರಣೆಯಾಗಲಿದೆ.


ಎರಡು ಅವಧಿಗಿಂತ ಹೆಚ್ಚು ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅಧಿಕಾರ ಅನುಭವಿಸುವಂತಿಲ್ಲ ಎಂಬ ನಿಯಮವನ್ನು ಬದಲಿಸಲು ಬಿಸಿಸಿಐ ಸಭೆಯಲ್ಲಿ ನಿರ್ಧರಿಸಲಾಗಿದೆ. ಒಂದು ವೇಳೆ ಇದೇ ನಿಯಮವಿದ್ದಿದ್ದರೆ ಗಂಗೂಲಿ ಬಿಸಿಸಿಐ ಅಧ್ಯಕ್ಷ ಪದವಿಯ ಅವಧಿ ಇನ್ನು ಆರು ತಿಂಗಳಿಗೆ ಮುಕ್ತಾಯಗೊಳ್ಳಬೇಕಿತ್ತು. ಈಗಾಗಲೇ ಗಂಗೂಲಿ ಕೋಲ್ಕೊತ್ತಾ ಕ್ರಿಕೆಟ್ ಮಂಡಳಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಬಿಸಿಸಿಐ ಅಧ್ಯಕ್ಷರಾಗಿ ಕೇವಲ 6 ತಿಂಗಳ ಅವಧಿಯಲ್ಲಿ ಏನೇನೋ ಸಾಧಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಿಯಮ ಬದಲಿಸಲು ನಿರ್ಧರಿಸಲಾಗಿದೆ. ಇನ್ನು, ಹಲವು ಮಾಜಿ ಕ್ರಿಕೆಟಿಗರಿಗೆ ಕಂಟಕವಾಗಿದ್ದ ಸ್ವ ಹಿತಾಸಕ್ತಿ ಸಂಘರ್ಷ ಕಾಯ್ದೆಗೂ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.  ಆದರೆ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಅಧಿಕಾರಾವಧಿ ವಿಸ್ತರಿಸದೇ ಇರಲು ನಿರ್ಧರಿಸಲಾಗಿದೆ. ಹೀಗಾಗಿ ಟೀಂ ಇಂಡಿಯಾಗೆ ಸದ್ಯದಲ್ಲೇ ಹೊಸ ಆಯ್ಕೆ ಸಮಿತಿ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಅನುಷ್ಕಾ ಶರ್ಮಾರನ್ನು ಟೀಕಿಸಿದ್ದಕ್ಕೆ ಮಾಜಿ ಕ್ರಿಕೆಟಿಗ ಎಂಜಿನಿಯರ್ ವಿರುದ್ಧ ಕೊಹ್ಲಿ ಸಿಟ್ಟು