Publish Date: Mon, 02 Dec 2019 (09:49 IST)
Updated Date: Mon, 02 Dec 2019 (09:50 IST)
ಮುಂಬೈ: ಇತ್ತೀಚೆಗಷ್ಟೇ ಆಯ್ಕೆ ಸಮಿತಿ ಸದಸ್ಯರು ಅನುಷ್ಕಾ ಶರ್ಮಾ ಆದೇಶದಂತೆ ನಡೆದುಕೊಳ್ಳುತ್ತಾರೆ ಎಂದು ಮಾಜಿ ಕ್ರಿಕೆಟಿಗ ಫಾರುಖ್ ಎಂಜಿನಿಯರ್ ಆರೋಪಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆ ವಿಚಾರಕ್ಕೆ ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟನ್ನೂ ಕೊಟ್ಟಿದ್ದರು.
ಇದೀಗ ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಮೇಲೆ ವಿನಾಕಾರಣ ಆರೋಪ ಮಾಡಿದ ಎಂಜಿನಿಯರ್ ವಿರುದ್ಧ ಕಿಡಿ ಕಾರಿದ್ದಾರೆ. ಈ ಮೂಲಕ ದೀರ್ಘಕಾಲದ ನಂತರ ಪತ್ನಿಯ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಿಮಗೆ ಆಯ್ಕೆ ಸಮಿತಿ ಮೇಲೆ ಏನಾದರೂ ಅಸಮಾಧಾನಗಳಿದ್ದರೆ ಏನು ಬೇಕಾದರೂ ಹೇಳಿಕೊಳ‍್ಳಿ. ಆದರೆ ಅದರಲ್ಲಿ ವಿನಾಕಾರಣ ಅನುಷ್ಕಾ ಹೆಸರನ್ನು ಯಾಕೆ ಎಳೆದು ತರುತ್ತೀರಿ. ನಟಿಯಾಗಿರುವ ಅನುಷ್ಕಾ ಹೆಸರನ್ನು ಪ್ರಸ್ತಾಪಿಸುವುದು ಸುಲಭ. ಇದರಿಂದ ಬೇಗ ಎಲ್ಲರ ಗಮನ ಸೆಳೆಯಬಹುದು. ಈ ರೀತಿಯ ಟೀಕೆಗಳ ಹಿಂದಿನ ಉದ್ದೇಶವೇ ಇದು ಎಂದು ಕೊಹ್ಲಿ ನೇರವಾಗಿಯೇ ಕೆಂಡಕಾರಿದ್ದಾರೆ.