ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ವಿಜಯದ ಬಳಿಕ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ತಂಡದ ಗುಣಗಾನ ಮಾಡಿದ್ದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೆಂಗಣ್ಣಿಗೆ ಗುರಿಯಾಗಿದೆ.
									
										
								
																	
ಟೀಂ ಇಂಡಿಯಾ ಗೆಲ್ಲಲು ಆರಂಭವಾಗಿದ್ದು ‘ದಾದ’ ಕಾಲದಲ್ಲಿ ಎಂದು ಕೊಹ್ಲಿ ಗಂಗೂಲಿ ನಾಯಕತ್ವದ ತಂಡವನ್ನು ಪ್ರಶಸ್ತಿ ಸಮಾರಂಭದಲ್ಲಿ ಸ್ಮರಿಸಿಕೊಂಡಿದ್ದರು. ಇದಕ್ಕೆ ಸುನಿಲ್ ಗವಾಸ್ಕರ್ ತಿರುಗೇಟು ಕೊಟ್ಟಿದ್ದಾರೆ.
									
			
			 
 			
 
 			
			                     
							
							
			        							
								
																	‘ಭಾರತದ ನಾಯಕ 2000 ರಲ್ಲಿ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆಲ್ಲಲು ಆರಂಭವಾಗಿತ್ತು ಎಂದಿದ್ದಾರೆ. ನನಗೆ ಗೊತ್ತು, ದಾದ ಈಗ ಬಿಸಿಸಿಐ ಅಧ್ಯಕ್ಷ. ಹಾಗಾಗಿ ಕೊಹ್ಲಿ ಬಹುಶಃ ಅವರ ಬಗ್ಗೆ ನಯವಾಗಿ ಮಾತನಾಡುತ್ತಿರಬಹುದು. ಆದರೆ ಭಾರತ ತಂಡ 70-80 ರ ದಶಕದಲ್ಲೂ ಗೆಲ್ಲುತ್ತಿತ್ತು’ ಎಂದು ಗವಾಸ್ಕರ್ ಟಾಂಗ್ ಕೊಟ್ಟಿದ್ದಾರೆ.