Publish Date: Mon, 25 Nov 2019 (09:22 IST)
Updated Date: Mon, 25 Nov 2019 (09:27 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಹೊನಲು ಬೆಳಕು ಟೆಸ್ಟ್ ಪಂದ್ಯದಲ್ಲಿ ಗೆದ್ದ ಸರಣಿ ವೈಟ್ ವಾಶ್ ಮಾಡಿಕೊಂಡ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲ್ಕೊತ್ತಾದಲ್ಲಿ ಐತಿಹಾಸಿಕ ಜಯ ದಾಖಲಿಸಿದ ಬಳಿಕ ವೀಕ್ಷಕರ ಕಡೆಗೆ ಕೈ ಬೀಸಿ ವಿಶೇಷವಾಗಿ ಧನ್ಯವಾದ ಸಲ್ಲಿಸಿದ ಕೊಹ್ಲಿ ಬಳಿಕ ಮಾತನಾಡಿ ‘ದಾದ’ ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾವನ್ನು ನೆನಪಿಸಿಕೊಂಡಿದ್ದಾರೆ.
‘ಗೆಲುವುಗಳು ಆರಂಭವಾಗಿದ್ದು ‘ದಾದ’ನ ತಂಡದಿಂದ. ಅದನ್ನು ನಾವು ಇಂದು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಕಳೆದ 3-4 ವರ್ಷಗಳಲ್ಲಿ ಪಟ್ಟ ಪರಿಶ್ರಮದ ಫಲ ಇಂದು ಉಣ್ಣುತ್ತಿದ್ದೇವೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿಯ ಶ್ರಮದ ಪರಿಣಾಮವೇ ಭಾರತ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಡಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.