Publish Date: Sat, 23 Nov 2019 (09:58 IST)
Updated Date: Sat, 23 Nov 2019 (09:59 IST)
ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿರುವ ಮಧ್ಯೆಯೇ ವಿಕೆಟ್ ಕೀಪರ್ ರಿಷಬ್ ಪಂತ್ ರನ್ನು ತಂಡದಿಂದ ಮುಕ್ತಗೊಳಿಸಲಾಗಿದೆ.
ತಂಡಕ್ಕೆ ಆಯ್ಕೆಯಾಗಿದ್ದರೂ ಕಳಪೆ ಫಾರ್ಮ್ ನಿಂದಾಗಿ ರಿಷಬ್ ಆಡುವ ಅವಕಾಶ ಪಡೆದಿರಲಿಲ್ಲ. ಆದರೆ ಇದೀಗ ಅವರನ್ನು ತಂಡದಿಂದ ಹೊರ ಕಳುಹಿಸಲಾಗಿದೆ. ಆದರೆ ಇದಕ್ಕೆ ಕಾರಣ ಬೇರೆ ಏನೂ ಅಲ್ಲ.
ಇದೀಗ ಸೈಯದ್ ಮುಷ್ತಾಕ್ ಅಲಿ ದೇಶೀಯ ಟಿ20 ಟೂರ್ನಿ ಸೂಪರ್ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದ್ದ ಡೆಲ್ಲಿ ಪರ ಆಡಲು ರಿಷಬ್ ರನ್ನು ತಂಡದಿಂದ ರಿಲೀಸ್ ಮಾಡಲಾಗಿದೆ. ಇದಾದ ಬಳಿಕ ವಿಂಡೀಸ್ ವಿರುದ್ಧದ ಸೀಮಿತ ಓವರ್ ಗಳ ಪಂದ್ಯ ನಡೆಯಬೇಕಿರುವುದರಿಂದ ಅದಕ್ಕೆ ತಯಾರಾಗಲು ರಿಷಬ್ ಗೆ ಉತ್ತಮ ವೇದಿಕೆ ಸಿಗಲಿದೆ.