Select Your Language

Notifications

webdunia
webdunia
webdunia
webdunia

ಅರ್ಧ ದಿನಕ್ಕೇ ಆಲೌಟ್ ಆದ ಬಾಂಗ್ಲಾ: ಟೀಂ ಇಂಡಿಯಾಗೂ ಮಯಾಂಕ್ ಅಗರ್ವಾಲ್ ಶಾಕ್!

ಅರ್ಧ ದಿನಕ್ಕೇ ಆಲೌಟ್ ಆದ ಬಾಂಗ್ಲಾ: ಟೀಂ ಇಂಡಿಯಾಗೂ ಮಯಾಂಕ್ ಅಗರ್ವಾಲ್ ಶಾಕ್!
ಕೋಲ್ಕೊತ್ತಾ , ಶುಕ್ರವಾರ, 22 ನವೆಂಬರ್ 2019 (17:12 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಮೊದಲ ಇನಿಂಗ್ಸ್ ನಲ್ಲಿ ಕೇವಲ 106 ರನ್ ಗಳಿಗೆ ಆಲೌಟ್ ಆಗಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ಟೀಂ ಇಂಡಿಯಾ ವೇಗಿಗಳ ದಾಳಿಗೆ ನಿಲ್ಲಲಾರದೇ ಅರ್ಧ ದಿನಕ್ಕೇ ಆಲೌಟ್ ಆಗಿದ್ದಾರೆ. ಭಾರತದ ಪರ ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3 ಮತ್ತು ಮೊಹಮ್ಮದ್ ಶಮಿ 2 ವಿಕೆಟ್ ಪಡೆದು ಮಿಂಚಿದರು. ಬಾಂಗ್ಲಾ ಪರ ಆರಂಭಿಕ ಶಾದ್ಮಾನ್ ಇಸ್ಲಾಮ್ 29, ಲಿಟನ್ ದಾಸ್ 24 ಮತ್ತು ನಯೀಂ ಹಸನ್ 19 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಎರಡಂಕಿ ಮೊತ್ತವನ್ನೇ ತಲುಪಲಿಲ್ಲ.

ಆದರೆ ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾಗೆ ಮಯಾಂಕ್ ಅಗರ್ವಾಲ್ ರೂಪದಲ್ಲಿ ಶಾಕ್ ಸಿಕ್ಕಿದೆ. ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಮಯಾಂಕ್ 14 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ರೋಹಿತ್ ಶರ್ಮಾ 11 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿ ಆಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ