Select Your Language

Notifications

webdunia
webdunia
webdunia
webdunia

ಭಾರತ-ಬಾಂಗ್ಲಾ ಪಿಂಕ್ ಟೆಸ್ಟ್: ಇದೂ ಮೂರೇ ದಿನದ ಪಂದ್ಯ!

ಭಾರತ-ಬಾಂಗ್ಲಾ ಪಿಂಕ್ ಟೆಸ್ಟ್: ಇದೂ ಮೂರೇ ದಿನದ ಪಂದ್ಯ!
ಕೋಲ್ಕೊತ್ತಾ , ಭಾನುವಾರ, 24 ನವೆಂಬರ್ 2019 (09:19 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಐತಿಹಾಸಿಕ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಕೊನೆಯಾಗುವ ಲಕ್ಷಣ ಗೋಚರಿಸುತ್ತಿದೆ.


ಕಳೆದ ಪಂದ್ಯವನ್ನೂ ಭಾರತ ಮೂರೇ ದಿನದಲ್ಲಿ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲೂ ಟೀಂ ಇಂಡಿಯಾ ದಾಳಿಗೆ ತತ್ತರಿಸಿರುವ ಬಾಂಗ್ಲಾ ಮೂರೇ ದಿನಕ್ಕೆ ಬಾಲ ಮುದುರಿಕೊಳ್ಳುವ ಲಕ್ಷಣ ಕಾಣುತ್ತಿದೆ.

ನಿನ್ನೆಯ ದಿನದಾಟಕ್ಕೆ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದ್ದು, ಭಾರತದ ಮೊದಲ ಇನಿಂಗ್ಸ್ ಮೊತ್ತದ ಹಿನ್ನಡೆ ದಾಟಲು ಇನ್ನೂ 89 ರನ್ ಗಳಿಸಬೇಕಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಪಂದ್ಯದಲ್ಲೂ ಬಾಂಗ್ಲಾ ಇನಿಂಗ್ಸ್ ಅಂತರದ ಸೋಲನುಭವಿಸುವ ಲಕ್ಷಣ ತೋರುತ್ತಿದೆ. ಒಂದು ವೇಳೆ ಬಾಂಗ್ಲಾ ಮುನ್ನಡೆ ಸಾಧಿಸಿದರೂ ದೊಡ್ಡ ಮೊತ್ತದ ಮುನ್ನಡೆಯೇನೂ ಪಡೆಯಲು ಸಾಧ್ಯವಾಗದು. ಇದು ಟೀಂ ಇಂಡಿಯಾಗೆ ಸುಲಭ ತುತ್ತಾಗಲಿದೆ. ಬಾಂಗ್ಲಾ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ 4 ವಿಕೆಟ್ ಕಬಳಿಸಿದರೆ ಉಮೇಶ್ ಯಾದವ್ 2 ವಿಕೆಟ್ ಪಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಶತಕ, ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ