ಮುಂಬೈ: ಬಾಂಗ್ಲಾದೇಶ ವಿರುದ್ಧ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯವಾಡಿದ ಬಳಿಕ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆಯೂ ಇಂತಹದ್ದೊಂದು ಟೆಸ್ಟ್ ಪಂದ್ಯ ಆಯೋಜಿಸುವ ಕುರಿತು ಚರ್ಚೆಗಳು ಜೋರಾಗಿವೆ.
ಈ ಮೊದಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಭಾರತದ ವಿರುದ್ಧ ಪಂದ್ಯ ಆಯೋಜಿಸಲು ಆಸಕ್ತಿ ವಹಿಸಿತ್ತಾದರೂ ಭಾರತ ಹಿಂದೇಟು ಹಾಕಿತ್ತು. ಆದರೆ ಈಗ ಯಶಸ್ವಿಯಾಗಿ ಪಿಂಕ್ ಬಾಲ್ ನಲ್ಲಿ ಟೆಸ್ಟ್ ಆಡಿದ ಮೇಲೆ ಭಾರತದ ಆತ್ಮವಿಶ್ವಾಸ ಹೆಚ್ಚಿದೆ.
ಹೀಗಾಗಿ ಮುಂದೊಂದು ದಿನ ಭಾರತ-ಆಸ್ಟ್ರೇಲಿಯಾ ನಡುವೆ ಪಿಂಕ್ ಬಾಲ್ ಟೆಸ್ಟ್ ನಿರೀಕ್ಷಿಸಬಹುದೇ ಎಂದು ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ತಮಾಷೆಯಾಗಿ ಉತ್ತರಿಸಿದ್ದಾರೆ. ‘ಮೊದಲು ಇದಕ್ಕೆ ವಿರಾಟ್ ಬಳಿ ಉತ್ತರ ಪಡೆದುಕೊಂಡು ಬನ್ನಿ. ಅವರು ಒಪ್ಪಿಗೆ ತಂದರೆ ನಾವು ಆಡಬಹುದು. ಈಗಿನ ಪರಿಸ್ಥಿತಿ ನೋಡಿದರೆ ಇದು ಸಾಧ್ಯ ಎನಿಸುತ್ತದೆ’ ಎಂದು ಒಂದು ರೀತಿಯಲ್ಲಿ ವ್ಯಂಗ್ಯವಾಗಿ ಹೇಳಿದ್ದಾರೆ.