Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾದಲ್ಲೂ ಪಿಂಕ್ ಬಾಲ್ ಟೆಸ್ಟ್ ಆಡ್ತೀವಿ, ಆದ್ರೆ ಒಂದು ಕಂಡೀಷನ್ ಎಂದ ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾದಲ್ಲೂ ಪಿಂಕ್ ಬಾಲ್ ಟೆಸ್ಟ್ ಆಡ್ತೀವಿ, ಆದ್ರೆ ಒಂದು ಕಂಡೀಷನ್ ಎಂದ ವಿರಾಟ್ ಕೊಹ್ಲಿ
ಕೋಲ್ಕೊತ್ತಾ , ಗುರುವಾರ, 21 ನವೆಂಬರ್ 2019 (15:52 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಾಳೆಯಿಂದ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದ್ದು, ಇದಕ್ಕೂ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.


ಕಳೆದ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಭಾರತ ವಿರುದ್ಧ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸಲು ಆಸಕ್ತಿ ವಹಿಸಿತ್ತು. ಆದರೆ ಆಗ ಅದಕ್ಕೆ ಬಿಸಿಸಿಐ ಒಪ್ಪಿರಲಿಲ್ಲ. ಆದರೆ ಈಗ ಸೌರವ್ ಗಂಗೂಲಿ ಆಸಕ್ತಿ ವಹಿಸಿದ್ದರಿಂದ ಪಿಂಕ್ ಬಾಲ್ ನಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ ಆಡುತ್ತಿದೆ. ಈ ಬಗ್ಗೆ ಕೊಹ್ಲಿಗೆ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನೆ ಕೇಳಿದಾಗ ಅದಕ್ಕೆ ಅವರು ಉತ್ತರಿಸಿದ್ದು ಹೀಗೆ.

‘ನಾವು ಆಸ್ಟ್ರೇಲಿಯಾದಲ್ಲೂ ಪಿಂಕ್ ಬಾಲ್ ನಲ್ಲಿ ಟೆಸ್ಟ್ ಆಡಲು ಸಿದ್ಧ. ಆದರೆ ಅದಕ್ಕೆ ಮೊದಲು ಒಂದು ಅಭ್ಯಾಸ ಪಂದ್ಯ ನಡೆಸಬೇಕು. ನಮಗೂ ಒಮ್ಮೆ ಪಿಂಕ್ ಬಾಲ್ ಟೆಸ್ಟ್ ಆಡಬೇಕೆಂಬ ಆಸೆಯಿತ್ತು. ಕೊನೆಗೂ ಅದು ನನಸಾಗುತ್ತಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ಕೊಹ್ಲಿಗೆ ಬೇಕಾಗಿದೆ 32 ರನ್