Publish Date: Thu, 21 Nov 2019 (10:23 IST)
Updated Date: Thu, 21 Nov 2019 (12:40 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಾಳೆಯಿಂದಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಹೊಸ ಸಾಧನೆ ಮಾಡಲು ನಾಯಕ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ.
ರನ್ ಮೆಷಿನ್ ಖ್ಯಾತಿಯ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕ ಎಂಬ ದಾಖಲೆ ಮಾಡಲಿದ್ದಾರೆ. ಇದಕ್ಕೆ ಅವರಿಗೆ ಬೇಕಾಗಿರುವುದು ಕೇವಲ 32 ರನ್.
ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕರಾಗಿ 5000 ರನ್ ಪೂರ್ತಿ ಮಾಡಲಿದ್ದಾರೆ. ಜಾಗತಿಕವಾಗಿ ಈ ಸಾಧನೆ ಮಾಡಿದ ಆರನೇ ನಾಯಕರಾಗಲಿದ್ದಾರೆ.